Tuesday, July 5, 2022

Latest Posts

ಕೋಟಿ ಕೋಟಿ ಆಫರ್‌ ನೀಡಿದ್ರೂ ಪಾನ್ ಮಸಾಲ ಜಾಹೀರಾತಿಗೆ ನೋ ಎಂದ ನಟ ಯಶ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಈಗ ಮತ್ತೊಂದು ಮಹತ್ವದ ನಿರ್ಧಾರದ ಮೂಲಕ ಮಾದರಿಯಾಗಿದ್ದು, ಬಹುಕೋಟಿ ಮೌಲ್ಯದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲಾ, ನಿಜ ಜೀವನದಲ್ಲಿ ರಿಯಲ್‌ ಹೀರೋ ಎಂಬುದನ್ನ ಸಾಬೀತುಪಡಿಸಿದ್ದಾರೆ. ಈ ಬಗ್ಗೆ ಸ್ವತಃ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಖಚಿತಪಡಿಸಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಕ್ಸಸ್ ಬೆನ್ನಲ್ಲೇ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ-ಕೋಟಿ ಬಾಚುವ ಮೂಲಕ ಯಶ್​ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಮಧ್ಯೆ ರಾಕಿಬಾಯ್ ಸಮಾಜ ಹಾಗು ಕೋಟ್ಯಂತರ ಅಭಿಮಾನಿಗಳ ದೃಷ್ಟಿಯಿಂದ ಈ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ದೇಶದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಪಾನ್ ಮಸಾಲ ಮತ್ತು ಏಲಕ್ಕಿ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಅಭಿನಯಿಸಿ ಹಾಗು ಪ್ರಚಾರ ಮಾಡಲು ಎಂಡಾರ್ಸ್‌ಮೆಂಟ್ ಕಂಪನಿ ಯಶ್ ಅವರಿಗೆ ಆಫರ್​ ನೀಡಿತ್ತು. ಈ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಸಂಭಾವನೆ ಕೊಡಲು ಸಹ ಪಾನ್ ಮಸಾಲ ಸಂಸ್ಥೆ ಮುಂದೆ ಬಂದಿತ್ತು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಗುಟ್ಕಾ ಜಾಹೀರಾತಿಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಟ್ರೋಲ್ಗೆ ಒಳಗಾಗಿದ್ದ ನಟ ಅಕ್ಷಯ್‌ ಕುಮಾರ್‌ ಕೂಡಾ ಬ್ರಾಂಡ್‌ ರಾಯಭಾರಿಯಿಂದ ಹಿಂದೆ ಸರಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss