ಉಚ್ಚಂಗೆಮ್ಮ ದರುಶನಕ್ಕೆ ಜನಸಾಗರ, ಭಕ್ತಿಯಲ್ಲಿ ಮಿಂದೆದ್ದ ಜನತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಉಚ್ಚಂಗೆಮ್ಮ ದೇವಿ ದರುಶನವನ್ನು ಭಕ್ತರು ಪಡೆದುಕೊಂಡಿದ್ದಾರೆ.

ವಿಜಯನಗರದ ಹರಪ್ಪನಹಳ್ಳಿಯ ಉಚ್ಚಂಗಿದುರ್ಗದ ಬೆಟ್ಟದ ಮೇಲೆ ನೆಲೆಸಿರುವ ತಾಯಿ ಉಚ್ಚಂಗೆಮ್ಮನ ಜಾತ್ರೆಗೆ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಭಕ್ತಿಯಲ್ಲಿ ಮಿಂದೆದ್ದಿದ್ದಾರೆ.

ದೇವಿಗೆ ಉಡಿ ತುಂಬಲು ಭರತ ಹುಣ್ಣಿಮೆ ಸೂಕ್ತ ಸಮಯವೆಂದು ಭಾವಿಸಲಾಗುತ್ತದೆ. ಈ ಕಾರಣದಿಂದ ದೇವಿಗೆ ಉಡಿ ತುಂಬಲು, ಹರಕೆ ಒಪ್ಪಿಸಲು ಜನ ಇಲ್ಲಿದೆ ಬಂದಿದ್ದರು. ಇಲ್ಲಿ ಮುತ್ತು ಕಟ್ಟುವ ಪದ್ಧತಿ ನಡೆಯದಂತೆ ಎಚ್ಚರವಹಿಸಲು ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು. ಗುಡ್ಡದ ಬಹುತೇಕ ಕಡೆ ಸಿಸಿ ಕ್ಯಾಮೆರಾ ಕೂಡ ಅಳವಡಿಸಲಾಗಿತ್ತು. ಬಿಸಿಲಿನ ಧಗೆಯನ್ನು ಲೆಕ್ಕಿಸದೆ ಜನ ಕ್ಯೂನಲ್ಲಿ ನಿಂತು ದೇವಿ ದರುಶನ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!