ರಾಖಿ ಪತಿ ಆದಿಲ್ ಖಾನ್ ಬಂಧನ, ಸಾಯೋತನಕ ಕ್ಷಮಿಸೋದಿಲ್ಲ ಎಂದ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಾಖಿ ಸಾವಂತ್ ದಾಂಪತ್ಯ ಅದಾಗಲೇ ಬೀದಿಗೆ ಬಿದ್ದಿದೆ, ಪತಿ ಮೋಸ ಮಾಡುತ್ತಿದ್ದಾರೆ ಎಂದು ರಾಖಿ ಮುಂಬೈನಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ಆದಿಲ್ ಖಾನ್‌ನನ್ನು ಬಂಧಿಸಿದ್ದಾರೆ.

ಬೇರೆ ಹೆಂಗಸಿನ ಜತೆ ಸಂಬಂಧ ಇಟ್ಟುಕೊಂಡಿದ್ದಾರೆ, ನನಗೆ ಮೋಸ ಮಾಡಿದ್ದಾರೆ. ಇದೇ ಕಾರಣಕ್ಕೆ ನಮ್ಮ ಮದುವೆ ವಿಷಯ ಹೊರಗೆ ಹೇಳಿಲ್ಲ ಎಂದು ರಾಖಿ ದೂರಿದ್ದರು.

ನನಗೆ ಮೋಸ ಆಗಿದೆ, ಆತ ಮೀಡಿಯಾದ ಎದುರು ನಾಟಕ ಮಾಡ್ತಾನೆ, ನನ್ನ ಹಣವನ್ನು ಕದ್ದಿದ್ದಾನೆ. ಖುರಾನ್ ಮೇಲೆ ಪ್ರಮಾಣ ಮಾಡಿಯೂ ಸುಳ್ಳು ಹೇಳುತ್ತಾನೆ. ಆತನನ್ನು ಸಾಯುವವರೆಗೂ ಕ್ಷಮಿಸೋದಿಲ್ಲ ಹಾಗೆ ಸಾಯುವವರೆಗೂ ಪ್ರೀತಿ ಮಾಡುತ್ತೇನೆ ಎಂದು ರಾಖಿ ಹೇಳಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!