Sunday, December 10, 2023

Latest Posts

ಛತ್ತೀಸ್​ಗಢ ಚುನಾವಣೆ: ಮತದಾನಕ್ಕೂ ಮುನ್ನ ಐಇಡಿ ಸ್ಫೋಟ, ಯೋಧನಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ಆರಂಭಗೊಂಡಿದೆ. ಈ ನಡುವೆಯೇ ನಕ್ಸಲರು ಐಇಡಿ ಸ್ಫೋಟಿಸಿದ್ದು, ಚುನಾವಣಾ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಯೋಧನೋರ್ವನಿಗೆ ಗಾಯಗಳಾಗಿರುವ ಘಟನೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಗಾಯಗೊಂಡ ಯೋಧನನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತದಾನ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಮತ್ತು ಕೋಬ್ರಾ ಪಡೆ ಟೊಂಡಮಾರ್ಕ ಕ್ಯಾಂಪ್‌ನಿಂದ ಎಲ್ಮಗುಂದ ಗ್ರಾಮಕ್ಕೆ ಕಾರ್ಯಾಚರಣೆಗಾಗಿ ಗಸ್ತು ತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಗಸ್ತು ತಿರುಗುವ ವೇಳೆ ಯೋಧ ನಕ್ಸಲರು ಅಳವಡಿಸಿದ್ದ ಐಇಡಿಯನ್ನು ತುಳಿದು ಸ್ಪೋಟಗೊಂಡ ಪರಿಣಾಮ ಯೋಧನ ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.

ಛತ್ತೀಸಗಢ ವಿಧಾನಸಭೆಗೆ ಮೊದಲ ಹಂತದಲ್ಲಿ 20 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಭದ್ರತೆಗಾಗಿ 25,249 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!