Sunday, December 10, 2023

Latest Posts

ಇಂದು ಛತ್ತೀಸ್‌ಗಢ-ಮಿಜೋರಾಂನಲ್ಲಿ ಚುನಾವಣೆ, ಈವರೆಗೆ ಆದ ಮತದಾನವೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಇಂದು ಮಿಜೋರಾಂ, ಛತ್ತೀಸ್‌ಗಢದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದೆ. ಮಿಜೋರಾಂನಲ್ಲಿ 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಯ 20ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಎರಡೂ ರಾಜ್ಯಗಳಲ್ಲಿ ಮತದಾರ ಪ್ರಭು ತನ್ನ ಹಕ್ಕನ್ನು ಚಲಾಯಿಸುತ್ತಿದ್ದಾನೆ. ಇದುವರೆಗೆ ಎರಡೂ ರಾಜ್ಯಗಳಲ್ಲಿ ನಡೆದ ಮತದಾನ ಶೇಕಡಾವಾರು ಪ್ರಕಟವಾಗಿದ್ದು, ಛತ್ತೀಸ್‌ಗಢದಲ್ಲಿ 9.93% ದಾಖಲಾಗಿದ್ದರೆ, ಮಿಜೋರಾಂನಲ್ಲಿ 12.80ರಷ್ಟು ಮತದಾನ ನಡೆದಿದೆ.

Image

ಎರಡೂ ರಾಜ್ಯಗಳಲ್ಲಿ ಪೊಲೀಸ್‌ ಬಿಗಿ ಭದ್ರತೆಯ ನಡುವೆ ಮತದಾನ ನಡೆಯುತ್ತಿದೆ. ಛತ್ತೀಸ್‌ಗಢದಲ್ಲಿ, ಕಮಲ-ಕೈ ನಡುವೆ ಜಟಾಪಟಿ ಇದ್ದರೆ, ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF), ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಪ್ರಾದೇಶಿಕ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!