Saturday, December 9, 2023

Latest Posts

ವಿಶ್ವ ಆಹಾರ ಬಿಕ್ಕಟ್ಟು ನಿವಾರಿಸಲು ನಿರ್ಣಾಯಕ ಹೆಜ್ಜೆ: ಕಪ್ಪು ಸಮುದ್ರದ ಮೂಲಕ ಉಕ್ರೇನ್‌ ನಿಂದ ಧಾನ್ಯಗಳ ರಪ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಶ್ವ ಆಹಾರ ಬಿಕ್ಕಟ್ಟು ನಿವಾರಿಸಲು ರಷ್ಯಾ ಹಾಗೂ ಉಕ್ರೇನ್‌ ನಡುವೆ ನಡೆದ ಸಭೆಯಲ್ಲಿ ನಿರ್ಣಾಯಕ ಹೆಜ್ಜೆ ತೆಗೆದುಕೊಳ್ಳಲಾಗಿದ್ದು ಕಪ್ಪು ಸಮುದ್ರದ ಮೂಲಕ ಧಾನ್ಯಗಳ ರಫ್ತು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

ಯುದ್ಧಶುರುವಾಗಿನಿಂದ ರಷ್ಯಾ ಮತ್ತು ಉಕ್ರೇನ್‌ ನಡುವೆ ಹಲವು ಸಂಧಾನ ಸಭೆಗಳು ವಿಫಲವಾಗಿದ್ದವು, ಆದರೆ ಬುಧವಾರ ನಡೆದ ಸಭೆಯಲ್ಲಿ ರಷ್ಯಾ ಹಾಗೂ ಉಕ್ರೇನ್‌ ಈ ನಿರ್ಣಾಯಕ ಹೆಜ್ಜೆಗೆ ಒಪ್ಪಿಗೆ ಸೂಚಿಸಿವೆ. ಮುಂದಿನವಾರ ಇಸ್ತಾಂಬುಲ್‌ ನಲ್ಲಿ ನಡೆಯಲಿರುವ ಮತ್ತೊಂದು ಸಭೆಯಲ್ಲಿ ಈ ಒಪ್ಪಂದಗಳಿಗೆ ಸಹಿಹಾಕಲಾಗುತ್ತದೆ ಎಂದು ಟರ್ಕಿಯ ರಕ್ಷಣಾ ಸಚಿವರು ಹೇಳಿದ್ದಾರೆ.

“ಈ ಒಪ್ಪಂದಕ್ಕೆ ಇನ್ನೂ ಕೆಲ ತಾಂತ್ರಿಕ ಅಂಶಗಳ ಅಗತ್ಯವಿದೆ, ನಾನು ಈ ಒಪ್ಪಂದವನ್ನು ಪ್ರೋತ್ಸಾಹಿಸುತ್ತಿದ್ದೇನೆ, ಈ ಒಪ್ಪಂದವು ಇನ್ನೂ ಪೂರ್ಣವಾಗಿಲ್ಲ” ಎಂದು ಯುಎನ್‌ ಮುಖ್ಯಸ್ಥರು ಉಲ್ಲೇಖಿಸಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾಗಿ ಐದು ತಿಂಗಳು ಕಳೆಯುತ್ತಿದೆ, ಪ್ರಪಂಚದೆಲ್ಲೆಡೆ ಬಹುಪಾಲು ಆಹಾರದ ಬೆಲೆಗಳು ಗಗನಕ್ಕೇರುತ್ತಿದ್ದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಹಸಿವಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶ್ವದ ಎರಡು ಪ್ರಮುಖ ರಪ್ತುದಾರರಾಗಿರುವ ಉಕ್ರೇನ್‌ ಹಾಗೂ ರಷ್ಯಾದಿಂದ ಧಾನ್ಯ ಮತ್ತು ರಸಗೊಬ್ಬರದ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ.

ಗೋಧಿ ಮತ್ತು ಇತರ ಆಹಾರ ಬೆಳಗಳನ್ನು ಉಕ್ರೇನ್‌ ನಿಂದ ಕಪ್ಪು ಸಮುದ್ರದ ಬಂದರಿನ ಮೂಲಕ ರಫ್ತು ಮಾಡಲು ಹಾಗೂ ರಸಗೊಬ್ಬರದ ರಫ್ತಿಗೆ ರಷ್ಯಾದ ಮೇಲಿನ ನಿರ್ಭಂಧಗಳನ್ನು ತೆಗೆದುಹಾಕಲು ಯುಎನ್‌ ಮುಖ್ಯಸ್ಥ ಗುಟೇರಸ್‌ ಈ ಒಪ್ಪಂದವನ್ನು ಪ್ರಸ್ತಾಪಿಸಿದ್ದು, ಪ್ರಸ್ತುತ ಎರಡೂ ದೇಶಗಳೊಂದಿಗೆ ಈ ಒಪ್ಪಂದ ಆಶಾದಾಯಕವಾಗುವಂತೆ ತೋರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!