ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸೂಚನೆಗಳ ಬೆಂಬಲವಿಲ್ಲದೇ ಗುರುವಾರದ ಷೇರುಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಅಲುಗಾಡುವ ಸೂಚನೆಯಲ್ಲಿ ತೆರೆದುಕೊಂಡಿವೆ. ಮಾರುಕಟ್ಟೆ ಪ್ರಾರಂಭದ ನಂತರ 9.16ಕ್ಕೆ ಸೆನ್ಸೆಕ್ಸ್ 146.71 ಪಾಯಿಂಟ್ ಅಥವಾ 0.27 ರಷ್ಟು ಏರಿಕೆಯಾಗಿ 53660.86 ನಲ್ಲಿ, ಮತ್ತು ನಿಫ್ಟಿ 48.50 ಪಾಯಿಂಟ್ ಅಥವಾ 0.30 ರಷ್ಟು ಏರಿಕೆಯಾಗಿ 16015.20 ಕ್ಕೆ ತಲುಪಿದೆ.
ಟಾಪ್ ಗೇನರ್ಗಳು ಮತ್ತು ಟಾಪ್ ಲೂಸರ್ಸ್:
ಸನ್ ಫಾರ್ಮಾ, ಭಾರ್ತಿ ಏರ್ಟೆಲ್, ಟೈಟಾನ್, ನೆಸ್ಲೆ, ಎಲ್ & ಟಿ, ಎಚ್ಯುಎಲ್, ಪವರ್ ಗ್ರಿಡ್ ಮತ್ತು ಡಾ ರೆಡ್ಡೀಸ್ ಸೆನ್ಸೆಕ್ಸ್ನಲ್ಲಿ ಅಗ್ರ ವಿಜೇತರಾಗಿದ್ದಾರೆ. ನಿಫ್ಟಿಯಲ್ಲಿ ಅಪೊಲೊ ಹಾಸ್ಪಿಟಲ್ಸ್, ಟಾಟಾ ಕನ್ಸ್ಯೂಮರ್ ಮತ್ತು ಬ್ರಿಟಾನಿಯಾ ಹೆಚ್ಚುವರಿ ಲಾಭ ಗಳಿಸಿವೆ.
ಮತ್ತೊಂದೆಡೆ, ಎಸ್ಬಿಐ, ಆಕ್ಸಿಸ್ ಬ್ಯಾಂಕ್, ಐಟಿಸಿ, ಟಾಟಾ ಸ್ಟೀಲ್, ಜೆಎಸ್ಡಬ್ಲ್ಯು ಸ್ಟೀಲ್ ಬೆರಳೆಣಿಕೆಯಷ್ಟು ಸೂಚ್ಯಂಕ ಕಳೆದುಕೊಂಡಿವೆ.