ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಪ್ಯಾಲೆಸ್ಟೇನ್ ಸಂಘರ್ಷದಿಂದಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ. ಶನಿವಾರ ಬೆಳಿಗ್ಗೆ ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ ತೈಲದ ಬೆಲೆ ಏಕಾಏಕಿ 5 ಪ್ರತಿಶತದಷ್ಟು ಜಿಗಿದಿದೆ.
ಪಶ್ಚಿಮ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ಗೆ 87 ಡಾಲರ್ಗಳನ್ನು ತಲುಪಿದೆ. ಬ್ರೆಂಟ್ ಕಚ್ಚಾ ತೈಲವು $ 4.18 ರಿಂದ 4.99 ರಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರೆಲ್ಗೆ 88.76 ಡಾಲರ್ಗೆ ತಲುಪಿದೆ. WTI ಪ್ರತಿ ಬ್ಯಾರೆಲ್ಗೆ 5.11 ರಷ್ಟು ಹೆಚ್ಚಾಗಿದ್ದು, 87.02 ಡಾಲರ್ಗೆ ಏರಿಕೆಯಾಗಿದೆ.
ಒಂದು ವಾರದ ಹಿಂದೆ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿತ್ತು. ಯುದ್ಧ ಪ್ರಾರಂಭವಾದಾಗಿನಿಂದ ಬೆಲೆ ಮತ್ತೆ ಏರಿಕೆ ಕಂಡಿದೆ. ಕಳೆದ ವಾರದಲ್ಲಿ ಬ್ರೆಂಟ್ ಕಚ್ಚಾ ತೈಲವು ಸುಮಾರು 11 ಪ್ರತಿಶತದಷ್ಟು ಕುಸಿದಿತ್ತು. ಮಾರ್ಚ್ ನಂತರ ಒಂದೇ ವಾರದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು ಇದೇ ಮೊದಲು. ಈಗ ಕಚ್ಚಾ ತೈಲದ ಏರಿಕೆಯ ಪ್ರವೃತ್ತಿ ಬೆಳೆದಿದೆ.