April 2, 2026
Thursday, April 2, 2026
spot_img

ಟ್ರಂಪ್ ಭಾಷಣ ಮುಗಿತ್ತಿದ್ದಂತೆ ಆಕಾಶಕ್ಕೇರಿದ ಕಚ್ಚಾ ತೈಲದ ಬೆಲೆ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹಲ್‌ಚಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಯುದ್ಧದ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಭಾಷಣದ ಬಳಿಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಚಲನವಲನ ಕಂಡುಬಂದಿದೆ.

ಯುದ್ಧ ಇನ್ನೂ ಕೆಲವು ವಾರಗಳು ಮುಂದುವರಿಯುವ ಸಾಧ್ಯತೆಯಿದೆ ಎಂಬ ಹೇಳಿಕೆ ಹೊರಬಿದ್ದ ತಕ್ಷಣ ಕಚ್ಚಾ ತೈಲದ ಬೆಲೆಗಳು ದಿಢೀರ್ ಏರಿಕೆ ಕಂಡಿವೆ. ಬ್ರೆಂಟ್ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 106 ಡಾಲರ್ ಗಡಿ ದಾಟಿದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ದರವೂ 104 ಡಾಲರ್ ಮಟ್ಟ ತಲುಪಿದೆ.

ಇದನ್ನೂ ಓದಿ:

ಭಾಷಣದಲ್ಲಿ ಟ್ರಂಪ್, ಇರಾನ್ ಸಂಘರ್ಷವು ತಕ್ಷಣ ಶಮನವಾಗುವ ಲಕ್ಷಣ ಕಾಣಿಸದಿದ್ದರೆ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಸೈನಿಕ ಕ್ರಮಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ತೈಲ ಸರಬರಾಜಿನ ಮೇಲೆ ಉಂಟಾಗಿರುವ ಅನಿಶ್ಚಿತತೆ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿದೆ. ಇದೇ ಕಾರಣದಿಂದ ಹೂಡಿಕೆದಾರರು ಸುರಕ್ಷತಾ ದೃಷ್ಟಿಯಿಂದ ತೈಲ ಖರೀದಿಗೆ ಮುಂದಾಗಿದ್ದು, ಬೆಲೆಗಳು ಏರಿಕೆಯಾಗಿವೆ.

ತಜ್ಞರ ಪ್ರಕಾರ, ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇಂಧನ ದರಗಳ ಮೇಲೂ ಪರಿಣಾಮ ಕಾಣಿಸಬಹುದು. ಭಾರತ ಸೇರಿದಂತೆ ತೈಲ ಆಮದು ದೇಶಗಳು ಈ ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !