ರೆಸಾರ್ಟ್‌ನಲ್ಲಿ ಯುವತಿ ಕತ್ತು ಸೀಳಿ ಶವದೊಂದಿಗೆ ವಿಡಿಯೋ ಕಾಲ್ ಮಾಡಿದ ಕ್ರೂರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲಿ ಪ್ರೇಮಿಯೊಬ್ಬ ತನ್ನ ಪಾರ್ಟ್‌ನರ್ ಕತ್ತು ಸೀಳಿ ಕೊಂದು, ಶವರ ಜೊತೆ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ವಾರದ ಹಿಂದೆ ಘಟನೆ ನಡೆದಿದ್ದು, ಶಿಲ್ಪಾ ಝರಿಯಾ ಎಂಬ ಯುವತಿಯ ಕತ್ತು ಸೀಳಿ ಹಾಸಿಗೆ ಮೇಲೆ ಇರುವ ಮೃತದೇಹವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದನೆ. ಜಬಲ್‌ಪುರದ ಮೇಖ್ಲಾ ರೆಸಾರ್ಟ್ ಇದಾಗಿದ್ದು, ಯುವತಿ ಮೃತದೇಹವನ್ನು ಪೊಲೀಸರು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.

ಯಾರೂ ನಂಬಿಕೆ ದ್ರೋಹ ಮಾಡಬೇಡಿ, ಮಾಡಿದರೆ ಹೀಗೆ ಆಗುತ್ತದೆ ಎಂದು ರಕ್ತದ ಮಡುವಿನಲ್ಲಿದ್ದ ಶವವನ್ನು ಆತ ತೋರಿಸಿದ್ದಾನೆ. ಕೊಲೆ ಮಾಡಿದ ಅಭಿಜಿತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪಾಟ್ನಾದ ವ್ಯಾಪಾರಿಯಾದ ಅಭಿಜಿತ್‌ನ ಗೆಳೆಯ ಜಿತೇಂದ್ರ ಜೊತೆ ಶಿಲ್ಪಾ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಳು. ಅಲ್ಲದೇ ಆತನ ಬಳಿ 12 ಲಕ್ಷ ಹಣ ಪಡೆದುಕೊಂಡು ಜಬಲ್‌ಪುರಕ್ಕೆ ಬಂದಿದ್ದಳು ಎನ್ನಲಾಗಿದೆ. ಜಿತೇಂದ್ರನಿಂದ ಮಾಹಿತಿ ಪಡೆದ ಅಭಿಜಿತ್ ಜಬಲ್‌ಪುರಕ್ಕೆ ಬಂದು ಆಕೆಯನ್ನು ಕೊಂದಿದ್ದಾನೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!