ತಾಯಿಯನ್ನು ಹೊರಹಾಕಿದ ಮಕ್ಕಳು, ಸಾಂತ್ವನಕ್ಕೆ ಧಾವಿಸಿದ ತಹಶಿಲ್ದಾರ್

 

ಹಾಸನ : ಸಾಕಿ ಸಲಹಿದ ‌ಮಕ್ಕಳೇ ಹೆತ್ತಮ್ಮನನ್ನ ಮನೆಯಿಂದ ಹೊರಹಾಕಿದ್ದಾರೆ‌.‌ ಇಂತಹ‌ ಮನ ಕಲಕುವ ಘಟನೆ ನಡೆದಿರುವುದು ಬೇಲೂರು ತಾಲೂಕಿನ‌‌ ಮಾದೀಹಳ್ಳಿ ಹೋಬಳೀಯ ಬೊಮ್ಮೇನಹಳ್ಳಿ‌‌ ಗ್ರಾಮದಲ್ಲಿ ನಡೆದಿದೆ.

ಆ ತಾಯಿಯ ಹೆಸರು ಹೊನ್ನಮ್ಮ. ದಿವಂಗತ ಹನುಮೇಗೌಡರ ಪತ್ನಿ. ಮಕ್ಕಳು ಆರೈಕೆ ಮಾಡದೇ ಮನೆಯಿಂದ ಹೊರಗೆ ಹಾಕಿದ್ದಾರೆ ಎಂಬುವುದು ಗ್ರಾಮಸ್ಥರು ನೀಡಿರುವ ಮಾಹಿತಿ. ಇದನ್ನು ಕಂಡ ಮರುಗಿದ ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಗಳ‌ ಗಮನಕ್ಕೆ‌ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ‌ಬೇಲೂರು ತಹಶೀಲ್ದಾರ್ ಮಮತಾ ಅವರು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಾಯಿಯ ಯೋಗ ಕ್ಷೇಮ‌ ವಿಚಾರಿಸಿ ಮಕ್ಕಳಿಗೆ ತಾಯಿಯನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಖಡಕ್ ಎಚ್ಚರಿಕೆ ನೀಡಿ ಬಂದಿದ್ದಾರೆ. 60 ವಯಸ್ಸಿನ ನಂತರ ತಂದೆ ತಾಯಿಯನ್ನು ಮಕ್ಕಳಂತೆ, ಪಾಲನೆ-ಪೋಷಣೆ ಮಾಡಬೇಕು ಎಂದು ಕುಟುಂಬದವರಿಗೆ ತಿಳಿ ಹೇಳಿದರು. ಸಿಡಿಪಿಒ‌ ಇಲಾಖೆಯ ಅಧಿಕಾರಿಗಳಿಗೂ ಕೂಡ ಆಗಾಗ್ಗೆ ಭೇಟಿ ನೀಡಿ ಹೊನ್ನಮ್ಮನ‌ ಆರೋಗ್ಯ ವಿಚಾರಿಸಬೇಕು ನೀವು ಎಂದು‌ ಸೂಚನೆ ನೀಡಿದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!