BIG NEWS | ಮಥುರಾ ಕೃಷ್ಣ ಜನ್ಮಭೂಮಿ ಸರ್ವೇಗೆ ಕೋರ್ಟ್ ಅನುಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಥುರಾದ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಸಂಕೀರ್ಣದ ASI ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ.

ಜಸ್ಟೀಸ್ ಮಯಾಂಕ್ ಕುಮಾರ್ ಜೈನ್ ಮಹತ್ವದ ಆದೇಶ ನೀಡಿದ್ದಾರೆ.

ಭಗವಾನ್ ಶ್ರೀಕೃಷ್ಣ ವಿರಾಜಮಾನ ಸಮಿತಿ ಹಾಗೂ ಇತರ 7 ಮಂದಿ ಸಲ್ಲಿಸಿ, ಹಿಂದೂ ದೇವಸ್ಥಾನವನ್ನು ಬೀಳಿಸಿ ಮಥುರಾದ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿವೆ. ಕಮಲದಳದ ಆಕಾರದಲ್ಲಿ ಕಂಬಗಳು ಹಿಂದೂ ದೇವಸ್ಥಾನ ಶೈಲಿಯಾಗಿದೆ. ಇದೇ ಕಂಬದಲ್ಲಿ ಹಿಂದೂ ದೇವಸ್ಥಾನ ಚಿಹ್ನೆಗಳು ಕಾಣುತ್ತಿದೆ. ಹೀಗಾಗಿ ಈದ್ಗಾ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಪೀಠ, ಇದೀಗ ಜ್ಞಾನವಾಪಿ ಮಸೀದಿ ರೀತಿಯಲ್ಲೇ ಸರ್ವೇಗೆ ಅನುಮತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!