ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕ್ರೂಸರ್ ಬಂದು ಡಿಕ್ಕಿ ಹೊಡೆದಿದ್ದು, ಕ್ರೂಸರ್ನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ.
ವಿಜಯಪುರದ ಇಂಡಿ ತಾಲೂಕಿನ ಧೂಳಖೇಡ್ ಬಳಿ ಘಟನೆ ಸಂಭವಿಸಿದೆ. ಭಯ್ಯಾಜಿ ಶಿಂಧೆ ಹಾಗೂ ಪತ್ನಿ ಸುಮಿತ್ರಾ ಶಿಂಧೆ ಮೃತರು. ಇನ್ನೂ ಒಂಬತ್ತು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.