August 13, 2026
Thursday, August 13, 2026
spot_img

CSK vs MI ಮೆಗಾ ಟ್ರೇಡ್: ಯುವ ತಾರೆಗಾಗಿ ಹಾರ್ದಿಕ್ ಪಾಂಡ್ಯ ಡೀಲ್ ರಿಜೆಕ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಆಟಗಾರರ ವಿನಿಮಯಕ್ಕೆ ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ಲೀಗ್‌ನ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವೆ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಿನಿಮಯದ ಬಗ್ಗೆ ಚರ್ಚೆಗಳು ಕಾವು ಪಡೆದುಕೊಂಡಿವೆ.

ಮುಂಬೈ ಫ್ರಾಂಚೈಸಿಯ ಹೊಸ ಷರತ್ತು

ವರದಿಗಳ ಪ್ರಕಾರ, ಮುಂಬೈ ತಂಡವು ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಡಲು ಸಿದ್ಧವಿದ್ದರೂ, ಪ್ರತಿಯಾಗಿ ಸಿಎಸ್‌ಕೆಯಿಂದ ಇಬ್ಬರು ಪ್ರಮುಖ ಆಟಗಾರರನ್ನು ಕೋರಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಶಿವಂ ದುಬೆ ಹಾಗೂ ಭವಿಷ್ಯದ ತಾರೆ ಆಯುಷ್ ಮ್ಹಾತ್ರೆ ಅವರನ್ನು ತಮಗೆ ನೀಡಿದರೆ ಮಾತ್ರ ಪಾಂಡ್ಯ ಅವರನ್ನು ಬಿಡಲಾಗುವುದು ಎಂಬ ಷರತ್ತನ್ನು ಎಂಐ ಫ್ರಾಂಚೈಸಿ ಮುಂದಿಟ್ಟಿದೆ.

ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಖಡಕ್ ನಿರ್ಧಾರ

ಮುಂಬೈನ ಈ ಅಚ್ಚರಿಯ ಬೇಡಿಕೆಗೆ ಸಿಎಸ್‌ಕೆ ಆಡಳಿತ ಮಂಡಳಿ ತಕ್ಷಣವೇ ನೋ ಎಂದಿದೆ. ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು ತಂಡದ ಭವಿಷ್ಯದ ಅತಿ ದೊಡ್ಡ ಆಸ್ತಿ ಎಂದು ಪರಿಗಣಿಸಿರುವ ಚೆನ್ನೈ, ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಈ ಬಹುನಿರೀಕ್ಷಿತ ಟ್ರೇಡಿಂಗ್ ಪ್ರಕ್ರಿಯೆ ಸದ್ಯಕ್ಕೆ ಹಳ್ಳ ಹಿಡಿದಂತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !