CINEMA| ಸಿನಿಮಾ ಟಿಕೆಟ್ ಮಾರಾಟ ಮಾಡಿದ ‘ಭರಾಟೆ’ ಚೆಲುವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದ ಚೆಲುವೆ ಭರಾಟೆ ಬ್ಯೂಟಿ ಶ್ರೀಲೀಲಾ ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲೂ ಒಳ್ಳೆಯ ಫ್ಯಾನ್‌ ಕ್ರೇಜ್‌ ಗಳಿಸಿಕೊಂಡಿದ್ದಾರೆ. ಮಾಸ್‌ ಮಹಾರಾಜಾ ರವಿತೇಜ ಅಭಿನಯದ ಚಿತ್ರ ‘ಧಮಾಕಾ’ ಡಿಸೆಂಬರ್ 23 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರವಿತೇಜಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ನಕ್ಕಿನ ತ್ರಿನಾಥ ರಾವ್ ನಿರ್ದೇಶನದ ಈ ಸಿನಿಮಾ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾವಾಗಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ ಗಳು, ಹಾಡುಗಳು, ಟೀಸರ್ ಗಳು, ಟ್ರೇಲರ್ ಗಳು ಪ್ರೇಕ್ಷಕರಲ್ಲಿ ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಯಾ ಮೂಡಿಸಿವೆ.

ಚಿತ್ರತಂಡ ಪ್ರಚಾರ ಕಾರ್ಯವನ್ನು ಶರವೇಗದಲ್ಲಿ ನಡೆಸುತ್ತಿದೆ. ಇದರ ಅಂಗವಾಗಿ ನಗರದ ಹಲವೆಡೆ ಪ್ರವಾಸ ಮಾಡಿ ತಮ್ಮ ಸಿನಿಮಾವನ್ನು ಅಭಿಮಾನಿಗಳ ಬಳಿ ಕೊಂಡೊಯ್ಯುತ್ತಿದೆ. ನಾಯಕಿ ಶ್ರೀಲೀಲಾ ಎಎಂಬಿ ಸಿನಿಮಾಸ್ ಥಿಯೇಟರ್ ನ ಧಮಾಕಾ ಟಿಕೆಟ್ ಕೌಂಟರ್ ನಲ್ಲಿ ಮುಂಗಡ ಟಿಕೆಟ್ ಮಾರಾಟ ಮಾಡಿದ್ದಾರೆ. ನಟಿಯನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಜನ ನೆರೆದಿದ್ದರು.

ಈ ಯುವ ಚೆಲುವೆ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಅವರೊಂದಿಗೆ ಡ್ಯಾನ್ಸ್ ಕೂಡ ಮಾಡಿದ್ದಾಳೆ. ಕಂಪ್ಲೀಟ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವಾಗಿ ಬರುತ್ತಿರುವ ಧಮಾಕಾದಲ್ಲಿ ತಮ್ಮ ಪಾತ್ರ ಖಂಡಿತಾ ಪ್ರೇಕ್ಷಕರನ್ನು ಮೆಚ್ಚಿಸುತ್ತದೆ. ರವಿತೇಜಾ ಅವರೊಂದಿಗಿನ ತಮ್ಮ ಕೆಮಿಸ್ಟ್ರಿಯನ್ನು ಚೆನ್ನಾಗಿದೆ ಎಂದು ಶ್ರೀಲೀಲಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!