ಬಿಸಿಲಿನ ದಾಹ ತಣಿಸುತ್ತೆ ಈ ಸೌತೆಕಾಯಿ-ಶು೦ಠಿ ಜ್ಯೂಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬಿಸಿಲಿನ ಬೇಗೆ ಆರಂಭಗೊಂಡಿದ್ದು, ಆರೋಗ್ಯಕರ ಪಾನೀಯಗಳು ಈ ಬಿಸಿಲಿನಲ್ಲಿ ಉಂಟಾಗುವ ದಾಹವನ್ನು ತಣಿಸುತ್ತವೆ. ನಿಮಗೂ ಬಿಸಿಲಿನ ಬೇಗೆ ತಟ್ಟಿದ್ರೆ ಒಮ್ಮೆ ಮಾಡಿ ನೋಡಿ ಈ ಸೌತೆಕಾಯಿ-ಶುಂಠಿ ಜ್ಯೂಸ್.‌

ಬೇಕಾಗುವ ಸಾಮಗ್ರಿಗಳು:
* ಸೌತೆಕಾಯಿ
* ಶು೦ಠಿ
* ಸಕ್ಕರೆ
* ಜೀರಿಗೆ ಪುಡಿ
* ಕಪ್ಪುಪ್ಪು
* ನೀರು

ಮಾಡುವ ವಿಧಾನ:
ಸೌತೆಕಾಯಿಯ ಹೋಳುಗಳು, ಶು೦ಠಿ, ಹಾಗೂ ನೀರನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಮಿಕ್ಸಿಗೆ ಹಾಕಿ ರುಬ್ಬಿ. ಅಗತ್ಯವಿದ್ದಷ್ಟು ನೀರು ಹಾಕಿಕೊಳ್ಳಿ. ನುಣ್ಣಗೆ ರುಬ್ಬಿದ ಬಳಿಕ ದೊಡ್ಡ ಲೋಟಕ್ಕೆ ವರ್ಗಾಯಿಸಿ. ಬಳಿಕ ಇದಕ್ಕೆ ಕಪ್ಪುಪ್ಪು, ಸಕ್ಕರೆ ಹಾಗೂ ಜೀರಿಗೆ ಪುಡಿಯನ್ನು ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಬೆರಕೆ ಮಾಡಿ. ಈಗ ರುಚಿಯಾದ ಮತ್ತು ತಂಪಾದ ಪಾನೀಯ ಕುಡಿಯಲು ಸಿದ್ಧಗೊಂಡಿದೆ. ಸೌತೆಕಾಯಿ ಶುಂಠಿ ಜ್ಯೂಸ್‌ ಕುಡಿದು ಬಿಸಿಲ ಬೇಗೆಯನ್ನು ಹೊಡೆದೋಡಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!