ಎಂದಾದರೂ ಮೊಸರು ಸ್ಯಾಂಡ್‌ವಿಚ್‌ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:
1. ಬ್ರೆಡ್ – 4
2. ಕ್ಯಾರೆಟ್ – 1
3. ಸಕ್ಕರೆ ಪುಡಿ – ಅಗತ್ಯವಿರುವಂತೆ
4. ಸ್ವೀಟ್ ಕಾರ್ನ್ – 1/4 ಕಪ್
5. ಎಲೆಕೋಸು – 3/4 ಕಪ್
6. ಮೆಣಸಿನ ಪುಡಿ – ರುಚಿಗೆ
7. ಕ್ಯಾಪ್ಸಿಕಂ – 1/4 ಕಪ್

ತಯಾರಿಸುವ ವಿಧಾನ:
ಮೊದಲು ಗಟ್ಟಿ ಮೊಸರು ತೆಗೆದುಕೊಳ್ಳಿ. ಒಂದು ಬಟ್ಟೆಯಲ್ಲಿ ಹಾಕಿ ನೀರು ಬರುವಂತೆ ಗಟ್ಟಿಯಾಗಿ ಕಟ್ಟಿ ಸೋಸಿ ಒಂದೆರಡು ಗಂಟೆಗಳ ಕಾಲ ಹಾಗೆಯೇ ಇಡಿ. ಮೊಸರಿನಲ್ಲಿದ್ದ ನೀರೆಲ್ಲ ಬಸಿದು ಹೋಗುತ್ತದೆ. ನಂತರ ಬಟ್ಟೆಯಿಂದ ಗಟ್ಟಿ ಮೊಸರನ್ನು ತೆಗೆದಿಡಿ. ಅಷ್ಟು ಹೊತ್ತಿಗೆ ಸ್ವೀಟ್‌ ಕಾರ್ನ್‌ ಅನ್ನು ಬೇಯಿಸಿಟ್ಟುಕೊಳ್ಳಿ.
ಒಂದು ಪಾತ್ರೆಗೆ ನೀರು ಬೇರ್ಪಡಿಸಿದ ಮೊಸರನ್ನು ತೆಗೆದುಕೊಳ್ಳಬೇಕು. ಅದಕ್ಕೆ ಬೇಯಿಸಿದ ಸ್ವೀಟ್ ಕಾರ್ನ್, ತುರಿದ ಎಲೆಕೋಸು, ಸಣ್ಣದಾಗಿ ಹೆಚ್ಚಿದ ಕ್ಯಾರೆಟ್, ಸಣ್ಣದಾಗಿ ಕೊಚ್ಚಿದ ಕ್ಯಾಪ್ಸಿಕಂ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸಕ್ಕರೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಮೆಣಸು ಸೇರಿಸಿ ಮಿಶ್ರಣ ಮಾಡಿ.
ನಂತರ ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು ಅವುಗಳ ಅಂಚುಗಳನ್ನು ಕತ್ತರಿಸಿ. ತಯಾರಿಸಿ ಇಟ್ಟುಕೊಂಡಿರುವ ಮೊಸರು ಮಿಶ್ರಣವನ್ನು ಬ್ರೆಡ್ ಮೇಲೆ ಅಡ್ಡಲಾಗಿ ಹರಡಿ. ಅದರ ಮೇಲೆ ಇನ್ನೊಂದು ಸ್ಲೈಸ್ ಬ್ರೆಡ್ ಹಾಕಿ.
ನಿಮಗೆ ಹಸಿ ಬ್ರೆಡ್ ತಿನ್ನಲು ಇಷ್ಟವಿಲ್ಲದಿದ್ದರೆ.. ಬ್ರೆಡ್ ಸ್ಲೈಸ್ ಗಳನ್ನು ಮೊದಲು ಟೋಸ್ಟ್ ಮಾಡಿ. ನಂತರ ಅವುಗಳ ಮೇಲೆ ಮೊಸರು ಮಿಶ್ರಣವನ್ನು ಹರಡಿ. ಅಷ್ಟೆ, ಬ್ರೆಡ್ ಸ್ಯಾಂಡ್ವಿಚ್ ಸಿದ್ಧವಾಗಿದೆ.  ಸಾಸ್‌ನೊಂದಿಗೆ ಬಾಯಲ್ಲಿ ನೀರೂರಿಸುವ ಮೊಸರು ಸ್ಯಾಂಡ್‌ವಿಚ್ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!