ಚಪಾತಿ, ಬಿಸಿ ಅನ್ನದ ಜೊತೆ ಕರಿಬೇವಿನ ಚಟ್ನಿ ಆಹಾ..ಸೂಪರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿಗಳು: 

ಕರಿಬೇವು: ಒಂದು ಕಪ್‌
ಹಸಿಮೆಣಸಿನಕಾಯಿ: 10
ಈರುಳ್ಳಿ: ಎರಡು
ಬೆಳ್ಳುಳ್ಳಿ: ಒಂದು
ಕಡಲೆಬೇಳೆ:ಎರಡು ಟೀ ಸ್ಪೂನ್
ಉದ್ದಿನಬೇಳೆ: ಎರಡು ಟೀ ಸ್ಪೂನ್
ಎಣ್ಣೆ:ಸ್ವಲ್ಪ
ಕೊತ್ತಂಬರಿ ಬೀಜ:ಒಂದು ಟೀ ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು: ನಿಂಬೆ ಗಾತ್ರ

ಮಾಡುವ ವಿಧಾನ: 

ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಕಡಲೆಬೇಲೆ, ಉದ್ದಿನಬೇಲೆ ಕೊತ್ತಂಬರಿ ಬೀಜ ಹಾಕಿ ಉರಿಯಿರಿ ಬಳಿಕ ಅದನ್ನು ತೆಗೆದಿಟ್ಟು, ಈಗ ಅದೇ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಜೀರಿಗೆ, ಸಾಸಿವೆ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಈಗ ಅದಕ್ಕೆ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಹುಣಸೆಹಣ್ಣು ಹಾಕಿ ಬಾಡಿಸಿ. ಕೊನೆಗೆ ಕರಿಬೇವಿನ ಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು ಒಂದು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಮೊದಲೇ ಹುರಿದಿಟ್ಟ ಕಾಳು ಹಾಕಿ ಸ್ವಲ್ಪ ಅವಶ್ಯಕತೆಯಿದ್ದಷ್ಟು ಮಾತ್ರ ನೀರು ಹಾಕಿ ಮಿಕ್ಸಿ ಮಾಡಬಹುದು ಅಥವಾ ರುಬ್ಬಬಹುದು.

ನುಣ್ಣಗೆ ಆದ ಬಳಿಕ ಹಾಗೆಯೂ ಸರ್ವ್‌ ಮಾಡಬಹದು ಅಥವಾ ಪುನಃ ಎಣ್ಣೆ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಉದ್ದಿನಬೇಳೆ ಹಾಕಿ ಒಗ್ಗರಣೆ ಕೂಡ ಮಾಡಿ ಬಡಿಸಿದರೆ ಸವಿಯಲು ಬಲು ರುಚಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!