ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ: ಸೂಟ್ ಕೇಸ್‌ನಲ್ಲಿ ಮಾನವ ತಲೆಬುರುಡೆಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಚಿನ್ನ, ಡ್ರಗ್ಸ್ ಮತ್ತು ಹಣವನ್ನು ಕಳ್ಳಸಾಗಣೆ ಮಾಡುವ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವುದು ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಮೆಕ್ಸಿಕೋ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕೊರಿಯರ್ ಬಾಕ್ಸ್ ಗಳಲ್ಲಿ ತಲೆಬುರುಡೆಗಳು ಪತ್ತೆಯಾಗಿರುವುದನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಕೊರಿಯರ್ ಬಾಕ್ಸ್ ಗಳಲ್ಲಿದ್ದ ಸೂಟ್ ಕೇಸ್ ಗಳನ್ನು ತಪಾಸಣಾ ಯಂತ್ರಗಳ ಸಹಾಯದಿಂದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾಗ ಎಕ್ಸ್ ರೇ ಮಿಷನ್ ನಲ್ಲಿ ಮಾನವ ತಲೆಬುರುಡೆ ಇರುವುದು ಪತ್ತೆಯಾಗಿದೆ. ಅಧಿಕಾರಿಗಳು ಸೂಟ್ ಕೇಸ್ ತೆರೆದಾಗ ಅದರಲ್ಲಿ ನಾಲ್ಕು ಮಾನವ ತಲೆಬುರುಡೆಗಳು ಪತ್ತೆಯಾಗಿವೆ.

ಸಂಬಂಧಿತ ದಾಖಲೆಗಳ ಆಧಾರದ ಮೇಲೆ, ಮೆಕ್ಸಿಕೊದ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಒಂದಾದ ಮೈಕೋಕಾನ್‌ನಿಂದ ತಲೆಬುರುಡೆಗಳನ್ನು ದಕ್ಷಿಣ ಕೆರೊಲಿನಾಕ್ಕೆ ಕೊರಿಯರ್ ಮಾಡಲಾಗುತ್ತಿದೆ ಎಂದು ಕಂಡುಬಂದಿದೆ. ಕೊರಿಯರ್ ಬಾಕ್ಸ್ ಗಳಲ್ಲಿ ಮಾನವ ತಲೆಬುರುಡೆಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!