ಒಂಟಿ ಮಹಿಳೆ ಮೇಲೆ 20 ಬೀದಿ ನಾಯಿಗಳು ದಾಳಿ: ಮಹಿಳೆ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಕಷ್ಟು ಜನರು ನಾಯಿಗಳನ್ನ ಸಾಕಲು, ಪ್ರೀತಿಸಲು ಇಷ್ಟ ಪಡುತ್ತಾರೆ. ಆದರೆ ಇನ್ನ ಸ್ವಲ್ಪ ಜನ ನಾಯಿ ಅಂದ್ರೆ ದೂರ ಓಡೋಗ್ತಾರೆ. ಅದರಲ್ಲೂ ಬೀದಿ ನಾಯಿಗಳು ಅಂದ್ರೆ ಅಂತು ಜನ ಹತಿರಕ್ಕೂ ಬರಲ್ಲ. ಇದೀಗ ಬೀದಿ ನಾಯಿಗಳ ದಾಳಿ ಇಂದ ಓರ್ವ ಮಹಿಳೆ ಮೃತ ಪಟ್ಟಿದ್ದಾರೆ.

ಪಂಜಾಬ್‌ನ ಕಪುರ್ತಲಾ ಜಿಲ್ಲೆಯಲ್ಲಿ 20 ನಾಯಿಗಳು ಒಂಟಿ ಮಹಿಳೆ ಮೇಲೆ ದಾಳಿ ನಡೆಸಿವೆ. ಮಹಿಳೆಯನ್ನ ಕಚ್ಚಿ ತಿಂದ ಪರಿಣಾಮ ಆಕೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಸುಲ್ತಾನ್‌ಪುರ ಲೋಧಿ ಪಟ್ಟಣ ವ್ಯಾಪ್ತಿಯ ನಿವಾಸಿ ಪರಿ ದೇವಿ (32) ಬೀದಿ ನಾಯಿಗಳ ದಾಳಿಗೆ ಮೃತಪಟ್ಟ ಮಹಿಳೆ. ಮಂಗಳವಾರ ಸಂಜೆ ಮನೆಗೆ ವಾಪಾಸ್ ಹೋಗುತಿದ್ದ ವೇಳೆ ಏಕಾಏಕಿ 20 ಬೀದಿ ನಾಯಿಗಳು ಆಕೆಯ ಮೇಲೆ ದಾಳಿ ನಡೆಸಿದೆ.

ರಾತ್ರಿ ಮಹಿಳೆ ಮನೆಗೆ ಬರದೇ ಇರುವುದನ್ನ ಗಮನಿಸಿದ ಮನೆಯವರು ಹುಡುಕಲು ಹೊರಟಾಗ ಮಹಿಳೆಯ ಶವ ಪತ್ತೆಯಾಗಿದೆ. ಗಂಭೀರ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದಾಳೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!