ಪ್ರಧಾನಿ ಹುಟ್ಟುಹಬ್ಬ: ಕಟಕ್ ಕಲಾವಿದನ ಕೈಯಲ್ಲಿ ಅರಳಿತು ಮೋದಿಯವರ ಭಾವಚಿತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಟಕ್ ಮೂಲದ ಕಲಾವಿದ ದೀಪಕ್ ಬಿಸ್ವಾಲ್, ಪ್ರಧಾನಿಯವರ 73 ನೇ ಜನ್ಮ ವಾರ್ಷಿಕೋತ್ಸವಕ್ಕೆ ಹೊಗೆಯಲ್ಲೇ ಮೋದಿಯವರ ಭಾವಚಿತ್ರವನ್ನು ರಚಿಸಿದರು. ಫೋಟೋ ಹಿಂಭಾಗ ಕೋನಾರ್ಕ್‌ನ ಸೂರ್ಯ ದೇವಾಲಯದ ಚಕ್ರವನ್ನು ಸೊಗಸಾದ ಪ್ರಾತಿನಿಧ್ಯದೊಂದಿಗೆ ಒಡಿಶಾ ಭವ್ಯ ಪರಂಪರೆಯನ್ನು ಚಿತ್ರಿಸಿದ್ದಾರೆ.

G-20 ಶೃಂಗಸಭೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಶ್ವ ನಾಯಕರು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸುವಾಗ ಪ್ರಧಾನಿ ಮೋದಿಯವರು ಒಡಿಶಾದ ಸಾಂಪ್ರದಾಯಿಕ ಕೋನಾರ್ಕ್ ಚಕ್ರವನ್ನು ಹಿನ್ನೆಲೆಯಾಗಿ ಬಳಸಿದ್ದರು.

ಪ್ರಧಾನಿ ಭಾವಚಿತ್ರ ರಚನೆ ಬಗ್ಗೆ ಮಾತನಾಡಿದ ಬಿಸ್ವಾಲ್, “ಪ್ರಧಾನಿ ನರೇಂದ್ರ ಮೋದಿ ಅವರ 73 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ನಾನು ಅವರ ಹೊಗೆ ಭಾವಚಿತ್ರವನ್ನು ರಚಿಸಿದ್ದೇನೆ. ಭಾವಚಿತ್ರದಲ್ಲಿ, ನಾನು ಒಡಿಶಾದ ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಕೋನಾರ್ಕ್ ಚಕ್ರವನ್ನು ಸಹ ಚಿತ್ರಿಸಿದ್ದೇನೆ. ನಮಗೆ ತಿಳಿದಿರುವಂತೆ, G20 ಔತಣಕೂಟದಲ್ಲಿ ವಿಶ್ವ ನಾಯಕರು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸುವಾಗ ಪ್ರಧಾನಿ ಮೋದಿಯವರು ಕೋನಾರ್ಕ್ ಚಕ್ರವನ್ನು ಹಿನ್ನೆಲೆಯಾಗಿ ಬಳಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ” ಎಂದರು.

ಕಲಾವಿದ ತನ್ನ ಕಲಾಕೃತಿಗಳನ್ನು ರಚಿಸಲು ಮೇಣದಬತ್ತಿಯ ಹೊಗೆ, ಹಳೆಯ ಪೆನ್ ನಿಬ್‌ ಮತ್ತು ಕ್ಯಾನ್ವಾಸ್ ಬಳಸಿರುವುದಾಗಿ ಹೇಳಿದರು.

ಪುಣೆಯ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿ ಅವರ 73ನೇ ಜನ್ಮ ವಾರ್ಷಿಕೋತ್ಸವಕ್ಕೆ ಸರಿಧಾನ್ಯಗಳನ್ನು ಬಳಸಿ  ಭಾವಚಿತ್ರವನ್ನು ರಚಿಸಿದ್ದಾರೆ. ಭಾವಚಿತ್ರದ ಗಾತ್ರ 10X18 ಅಡಿ ಮತ್ತು ಸುಮಾರು 60 ಕೆಜಿ ಧಾನ್ಯಗಳಾದ ಗೋಧಿ, ಉದ್ದು ಮತ್ತು ರಾಗಿ ನಿಂದ ಮಾಡಲ್ಪಟ್ಟಿದೆ. ಭಾವಚಿತ್ರವು ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 18 ರವರೆಗೆ ಪುಣೆ ನಗರದ ಬುಧ್ವರ್ ಪೇಠ್ ಪ್ರದೇಶದಲ್ಲಿ ಕಾಳಿಕಾ ಮಾತಾ ಮಂದಿರ ಭವನದಲ್ಲಿ ಪ್ರದರ್ಶನಕ್ಕಿರಿಸಿದ್ದಾರೆ. ಇದನ್ನು ನೋಡಲು ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಕಾರ್ಯಕರ್ತ ಕಿಶೋರ ತಾರವಾಡೆ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!