ಡೈಮಂಡ್​ ಲೀಗ್​ನಲ್ಲಿ ನೀರಜ್​ ಚೋಪ್ರಾಗೆ ದ್ವಿತೀಯ ಸ್ಥಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಸ್ಟಾರ್ ಆಟಗಾರ ನೀರಜ್ ಚೋಪ್ರಾ ಪ್ರತಿಷ್ಠಿತ ಡೈಮಂಡ್ ಲೀಗ್ ನ ಫೈನಲ್‌ನಲ್ಲಿ ಜಾವೆಲಿನ್‌ ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಕೊಂಡಿದ್ದಾರೆ. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶನಿವಾರ ನಡೆದ ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ 83.80 ಮೀಟರ್ ಎಸೆದು ದ್ವಿತೀಯ ಸ್ಥಾನ ಪಡೆದರು.

ಜೆಕ್ ಸ್ಟಾರ್ ತಮ್ಮ ಅಂತಿಮ ಸುತ್ತಿನಲ್ಲಿ 84.24 ಮೀಟರ್ ಅತ್ಯುತ್ತಮ ಎಸೆತವನ್ನು ದಾಖಲಿಸಿದರು. ಮೊದಲ ಎಸೆತದಲ್ಲಿಯೇ 84.01 ಮೀಟರ್ ಎಸೆಯುವ ಮೂಲಕ ಅವರು ಇತರಿಗಿಂತ ಮುಂದಿದ್ದರು. ಕೊನೆಗೆ ಅವರೇ ಚಿನ್ನದ ಪದಕ ಪಡೆದುಕೊಂಡರು. ಫಿನ್ಲೆಂಡ್​ ಆಲಿವರ್ ಹೆಲಾಂಡರ್ 83.74 ಮೀಟರ್​ ಎಸೆದು ಮೂರನೇ ಸ್ಥಾನ ಪಡೆದರು. ಆಂಡ್ರಿಯನ್ ಮರ್ಡೇರ್ (81.79 ಮೀ), ಕರ್ಟಿಸ್ ಥಾಂಪ್ಸನ್ (77.01 ಮೀ) ಮತ್ತು ಆಂಡರ್ಸನ್ ಪೀಟರ್ಸ್ (74.71 ಮೀ) ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!