April 28, 2026
Tuesday, April 28, 2026
spot_img

ಭಾಷಣ ಮೊಟಕುಗೊಳಿಸಿದ್ದು, ರಾಜ್ಯಪಾಲರಿಗೆ ಗೌರವ ತರಲ್ಲ: ಸಚಿವ ಚಲುವರಾಯಸ್ವಾಮಿ

ಹೊಸದಿಗಂತ ವರದಿ,ಮಂಡ್ಯ :

ಜಂಟಿ ಅಧಿವೇಶನದಲ್ಲಿ ಭಾಷಣವನ್ನು ಮೊಟಕುಗೊಳಿಸಿದ ಹೋದ ರಾಜ್ಯಪಾಲರಿಗೆ ಗೌರವ ತರುವುದಿಲ್ಲ. ಇದೊಂದು ಹೈಡ್ರಾಮದ ರೀತಿಯಲ್ಲಿ ನಡೆಯಿತು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಗೀತೆ ಬಿಟ್ಟು ಭಾಷಣ ಮಾಡದೆ ಹೋದದ್ದು ರಾಜ್ಯಪಾಲರಿಗೆ ಗೌರವ ತರುತ್ತದೆಯೇ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ತಯಾರು ಮಾಡಿದ ಭಾಷಣ ಓದುವುದು ರಾಜ್ಯಪಾಲರ ಪರಿಪಾಠ. ಎಲ್ಲ ರಾಜ್ಯದ ರಾಜ್ಯಪಾಲರು ಅದನ್ನೇ ಓದಬೇಕು. ಆದರೆ ರಾಜ್ಯಪಾಲರು ಕೇಂದ್ರ ಸರ್ಕಾರದ ಪ್ರತಿನಿಧಿಯೇ ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್ ಎಂದು ಘೋಷಣೆ ಮಾಡಲಿ, ಆಗ ಈ ಪ್ರಶ್ನೆ ಬರುವುದಿಲ್ಲ ಎಂದ ಸಚಿವರು, ಕುಮಾರಸ್ವಾಮಿ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯಪಾಲರನ್ನು ಕೇಂದ್ರ ಸರ್ಕಾರದ ಏಜೆಂಟ್ ಎಂದು ಕರೆದಿದ್ದರು. ತಮಿಳುನಾಡು, ಕೇರಳದಲ್ಲೂ ಇದೇ ಆಗಿದೆ. ಇದರಿಂದ ರಾಜ್ಯದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. ಕೇಂದ್ರ ಸರ್ಕಾರ, ಮೋದಿ, ಅಮಿತ್‌ಶಾ ಅವರು ಈ ರೀತಿಯ ನಿರ್ದೇಶನ ನೀಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !