July 28, 2026
Tuesday, July 28, 2026
spot_img

ದೇಶದಲ್ಲಿ ಇಂಧನದ ಅಭಾವ ಇಲ್ಲ, ಭಯದಿಂದ ಖರೀದಿಸಬೇಡಿ: ಜನತೆಗೆ ಕೇಂದ್ರ ಸರಕಾರ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಕೊರತೆ ಉಂಟಾಗಿದ್ದು, ಆದರೆ ಭಾರತದಲ್ಲಿ ಸದ್ಯದ ಮಟ್ಟಿಗೆ ಯಾವುದೇ ರೀತಿಯ ಅಭಾವ ಉಂಟಾಗಲಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಪ್ರಸುತ್ತ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಇದ್ದು, ಯಾವುದೇ ವಿತರಕರಲ್ಲಿ ದಾಸ್ತಾನು ಖಾಲಿಯಾಗಿಲ್ಲ. ಶೇ.93ಷ್ಟು ಪೂರೈಕೆಯಾಗುತ್ತಿದೆ ಎಂದು ಹೇಳಿದರು.

ಕೆಲವಡೆ ತೈಲ ಅಭಾವದ ವದಂತಿಗಳು ಹರಡುತ್ತಿದ್ದು, ಜನರು ಈ ಕುರಿತು ಯಾವುದೇ ಗೊಂದಲಕ್ಕೆ ಒಳಗಾಗಬೇಡಿ. ಭಯದಿಂದ ಖರೀದಿಸಬೇಡಿ ಎಂದು ತಿಳಿಸಿದರು.

ಈ ವೇಳೆ ದೇಶದ ಕೆಲವಡೆ ಉಂಟಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಅಭಾವದ ಕುರಿತು ಮಾತನಾಡಿದ ಅವರು, ಏಪ್ರಿಲ್‌ನಲ್ಲಿ ಸುಮಾರು 1,65,600 ಟನ್ ವಾಣಿಜ್ಯ ಎಲ್‌ಪಿಜಿ ಮಾರಾಟವಾಗಿದೆ. ಮಾರ್ಚ್‌ನಲ್ಲಿ, ಸುಮಾರು 1,29,500 ಟನ್‌ಗಳಷ್ಟಿತ್ತು ಎಂದರು.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಸ್ಟಾಕ್ ಇದೆ. ಆದರೆ ವದಂತಿಗಳಿಂದ ಭಯ ಬಿದ್ದು ಜನರು ಖರೀದಿಗೆ ಮುಂದಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಆದ್ಯತೆಯ ಮೇಲೆ ಪರಿಹರಿಸಲಾಗುತ್ತದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !