Monday, September 26, 2022

Latest Posts

ಕಟ್ಪುಟ್ಲಿ ಚಿತ್ರದ ಟ್ವಿಟರ್ ವಿಮರ್ಶೆ: ಅಕ್ಷಯ್‌ ಕುಮಾರ್ ಕೆರಿಯರ್‌ನ ʼಮಾಸ್ಟರ್‌ ಪೀಸ್‌ʼ ಎಂದ ಪ್ರೇಕ್ಷಕರು!

ಹೊಸದಿಗಿಂತ ಡಿಜಿಟಲ್‌ ಡೆಸ್ಕ್‌
ತಾರಾಗಣ
: ಅಕ್ಷಯ್ ಕುಮಾರ್, ರಾಕುಲ್ ಪ್ರೀತ್ ಸಿಂಗ್, ಸರ್ಗುನ್ ಮೆಹ್ತಾ, ಚಂದ್ರಚೂರ್ ಸಿಂಗ್, ಹೃಷಿತಾ ಭಟ್
ಕಟ್ಪುಟ್ಲಿ ಚಿತ್ರದ ಟ್ವಿಟರ್ ವಿಮರ್ಶೆ:
2018 ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರ ರಾತ್ಸಾಸನ್‌ ಅದ್ಭುತ ಯಶಸ್ಸು ಸಾಧಿಸಿತ್ತು. ಹೊಸಬಗೆಯ ಕ್ರೈಂ ಥ್ರಿಲ್ಲರ್‌ ನಿರೂಪಣೆಯಿದ್ದ ಈ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದರು. ಈ ಚಿತ್ರ ಇದೀಗ ಅಕ್ಷಯ್ ಕುಮಾರ್ ನಟನೆಯಲ್ಲಿ ಹಿಂದಿಗೆ ರಿಮೇಕ್‌ ಆಗಿದ್ದು, ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ.
ಚಿತ್ರಕ್ಕೆ ರಂಜಿತ್ ತಿವಾರಿ ನಿರ್ದೇಶನವಿದೆ. ಉತ್ತರ ಭಾರತದ ಒಂದು ಸಣ್ಣ ಪಟ್ಟಣದಲ್ಲಿ (ಕಸೌಲಿ) ಸೈಕೋಪಾತ್ ಸರಣಿ ಕೊಲೆಗಾರನಿಂದ ಹಲವಾರು ಮಕ್ಕಳ ಕೊಲೆಯಾಗುತ್ತಿದೆ. ಆದರೆ ಕೊಲೆಗಾರನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ. ಆದರೆ ಬರಹಗಾರನೂ ಆಗಿರುವ ಕರ್ತವ್ಯನಿಷ್ಠ ಸಬ್ ಇನ್ಸ್‌ಪೆಕ್ಟರ್ ಒಬ್ಬ ಪ್ರಕರಣದ ಹಿಂದೆ ಬೀಳುತ್ತಾನೆ. ಸೈಕೋಪಾತ್‌ ಕಿಲ್ಲರ್‌ ಅನ್ನು ಹಿಂಬಾಲಿಸುವ ಇನ್ಸ್‌ ಪೆಕ್ಟರ್ ಪ್ರಕರಣವನ್ನು ಹೇಗೆ ಭೇದಿಸುತ್ತಾನೆ ಎಂಬುದು ಕಥಾಹಂದರ. ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಅರ್ಜನ್ ಸೇಥಿ ಪಾತ್ರದಲ್ಲಿ ಅಕ್ಷಯ್ ಬಣ್ಣಹಚ್ಚಿದ್ದಾರೆ. ಸರ್ಗುನ್ ಮೆಹ್ತಾ ಮತ್ತು ರಾಕುಲ್ ಪ್ರೀತ್ ಸಿಂಗ್ ಸಹ ನಟಿಸಿರುವ ಕಟ್‌ಪುಟ್ಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಕ್ಷಯ್‌ ಕುಮಾರ್‌ ಕೆರಿಯರ್‌ ನ ಅತ್ಯುತ್ತಮ ಚಿತ್ರಗಳಲ್ಲಿ ಇದು ಒಂದು ಎಂದು ಹಲವಾರು ಮಂದಿ ಟ್ವಿಟರ್‌ ನಲ್ಲಿ ಬಣ್ಣಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, “ಎಂತಹ ಉತ್ತಮವಾದ ಚಲನಚಿತ್ರ. ಕಟ್‌ಪುಟ್ಲಿ ಪ್ರದರ್ಶನ ಅದ್ಭುತವಾಗಿದೆ. ಅಕ್ಷಯ್‌ಕುಮಾರ್ ಸರ್ ಅಭಿಯದ ಚಿತ್ರ ಮೂಲಕ್ಕಿಂತ ಉತ್ತಮವಾಗಿದೆ. 2022ರ ಅತ್ಯುತ್ತಮ ಆಕ್ಷನ್ ಥ್ರಿಲ್ಲರ್ ಚಲನಚಿತ್ರ ಎಂದು ಬಣ್ಣಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!