ಮೋದಿ ಕಾರ್ಯಕ್ರಮಕ್ಕೆ ಜನಸಾಗರ: ಗೋಲ್ಡ್ ಫಿಂಚ್ ಸಿಟಿ ಮೈದಾನ ಭರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬೃಹತ್‌ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೋದಿ ಭೇಟಿಗಾಗಿ ರಾಜ್ಯಾದ್ಯಂತ ಜನ ಮಂಗಳೂರಿಗೆ ತೆರಳಿದ್ದಾರೆ. ಮಂಗಳೂರಿನಾದ್ಯಂತ ಕಿಕ್ಕಿರಿದ ಜನಸಂದಣಿ ಉಂಟಾಗಿದೆ. ಸಮಾವೇಶಕ್ಕೆ ಗೋಲ್ಡ್ ಫಿಂಚ್ ಸಿಟಿ ಮೈದಾನ ಸಿದ್ಧವಾಗಿದೆ. ಆಕರ್ಷಕ ರೀತಿಯಲ್ಲಿ ವೇದಿಕೆ ಮತ್ತು ಸಭಾಂಗಣ ನಿರ್ಮಿಸಲಾಗಿದೆ. ಸುಮಾರು ಎರಡು ಸಾವಿರ ಬಸ್‌ಗಳ ವ್ಯವಸ್ಥೆ ಮಾಡಿದ್ದರೂ ಸ್ವಂತ ವಾಹನಗಳಲ್ಲಿಯೂ ಜನ ಬರುತ್ತಿದ್ದಾರೆ.

ಬೆಳಗ್ಗೆ 11.30ಕ್ಕೇ ಸಭಾಂಗಣ ಭರ್ತಿಯಾಗಿದ್ದು, ಕೂರಲು ಸ್ಥಳವಿಲ್ಲದಂತಾಗಿದೆ. ಸುಮಾರು 75 ಸಾವಿರ ಜನರಿಗೆ ಜಿಲ್ಲಾಡಳಿತ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ ಬಳಿಕ ಜನ ಸಭಾಂಗಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ನಿಲ್ಲಲೂ ಜಾಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಗಿ ಬಂದೋಬಸ್ತ್:‌  

ಮೋದಿ ಭೇಟಿ ಹಿನ್ನೆಲೆ ನಗರದೆಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಬಾಂಬ್‌ ಸ್ಕ್ವಾಡ್‌, ಶ್ವಾನ ದಳ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇನ್ನೂ ಮೋದಿ ಬರುವ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುತ್ತಿರುವ ಪ್ರತಿಯೊಬ್ಬರನ್ನು ಪರಿಶೀಲಿಸಲಾಗುತ್ತಿದೆ. ಕಪ್ಪು ಬಟ್ಟೆ ಧರಿಸಿದವರನ್ನು ವಾಪಸ್‌ ಕಳಿಸಲಾಗುತ್ತಿದೆ. ಎಲ್ಲರನ್ನೂ ಕೂಲಂಕುಷವಾಗಿ ಪರೀಕ್ಷಿಸಿ ಒಳಗೆ ಬಿಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!