August 10, 2026
Monday, August 10, 2026
spot_img

CWG 2026: ಟ್ರಿಪಲ್ ಜಂಪ್‌ನಲ್ಲಿ ಭಾರತದ ಡಬಲ್ ಧಮಾಕಾ; ಬೆಳ್ಳಿ-ಕಂಚಿನ ಪದಕ ಸಾಧನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಮ್ಮೆ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ್ದು, ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಪ್ರವೀಣ್ ಚಿತ್ರಾವೆಲ್ ಬೆಳ್ಳಿ ಪದಕ ಗೆದ್ದರೆ, ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕ ಜಯಿಸಿ ಭಾರತದ ಪದಕಪಟ್ಟಿಗೆ ಮತ್ತಷ್ಟು ಮೆರುಗು ತಂದಿದ್ದಾರೆ.

ಚಿತ್ರಾವೆಲ್‌ನಿಂದ ಬೆಳ್ಳಿ ಪದಕ

ಸ್ಪರ್ಧೆಯ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಪ್ರವೀಣ್ ಚಿತ್ರಾವೆಲ್, ನಾಲ್ಕನೇ ಪ್ರಯತ್ನದಲ್ಲಿ 16.58 ಮೀಟರ್ ಜಿಗಿದು ಎರಡನೇ ಸ್ಥಾನ ಪಡೆದರು. ಅದ್ಭುತ ಪ್ರದರ್ಶನದ ಮೂಲಕ ಅವರು ಬೆಳ್ಳಿ ಪದಕವನ್ನು ಭಾರತಕ್ಕೆ ತಂದುಕೊಟ್ಟರು.

ಸೆಲ್ವ ಪ್ರಭುಗೆ ಕಂಚಿನ ಗೌರವ

ಸೆಲ್ವ ಪ್ರಭು ತಿರುಮಾರನ್ ತಮ್ಮ ಅತ್ಯುತ್ತಮ 16.52 ಮೀಟರ್ ಜಿಗಿತದೊಂದಿಗೆ ಮೂರನೇ ಸ್ಥಾನ ಪಡೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !