2022 ರಲ್ಲಿ ದ್ವಿಗುಣಗೊಂಡಿದೆ ಭಾರತದ ಸರ್ಕಾರಿ ಏಜೆನ್ಸಿಗಳ ಮೇಲಿನ ಸೈಬರ್‌ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳಿಗೆ ತೆರದುಕೊಳ್ಳುತ್ತ ಮೆಟಾವರ್ಸ್‌ ಗೆ ಪ್ರವೇಶಿಸಲು ಸಜ್ಜಾಗುತ್ತಿದೆ. ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲವೂ ತಂತ್ರಜ್ಞಾನ ಕ್ರಾಂತಿಗೆ ಒಳಪಟ್ಟು ಹಲವಾರು ರೀತಿಯಲ್ಲಿ ಅಭಿಬವೃದ್ಧಿ ಸಾಧಿಸುತ್ತ ಮುನ್ನುಗ್ಗುತ್ತಿವೆ. ಹೊಸ ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳು ಬದುಕನ್ನು ಸುಲಭಗೊಳಿಸುತ್ತಿದ್ದರೆ ಇನ್ನೊಂದಡೆ ತಂತ್ರಜ್ಞಾನಾಧಾರಿತ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸೈಬರ್‌ ದಾಳಿ ಅಂತಹವುಗಳಲ್ಲೊಂದು. ಒಂದರ್ಥದಲ್ಲಿ ಹೇಳುವುದಾದರೆ ಈ ಸೈಬರ್‌ ದಾಳಿಯು ಇತರೆ ಭಯೋತ್ಪಾದಕ ದಾಳಿಗೆ ಸಮವೆಂದೇ ಹೇಳಬಹುದು. ಈ ಸೈಬರ್‌ ದಾಳಿಯ ದೇಶವೊಂದರ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲುದು. ಹಾಗಾಗಿಯೇ ಕ್ವಾಡ್‌ ಸೇರಿದಂತೆ ಇತರ ಕೆಲ ಜಾಗತಿಕ ಗುಂಪುಗಳು ಸೈಬರ್‌ ಯುದ್ಧಕ್ಕೆ ಸಜ್ಜಾಗುತ್ತಿವೆ. ಸೈಬರ್‌ ದಾಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಾಗತಿಕ ಮಟ್ಟದಲ್ಲಿಯೂ ಪ್ರಯತ್ನಿಸಲಾಗುತ್ತಿದೆ.

ಇತ್ತೀಚಿನ ವರದಿಯೊಂದರ ಪ್ರಕಾರ ಭಾರತವು 2022ರಲ್ಲಿ ಅತಿ ಹೆಚ್ಚು ಸೈಬರ್‌ ದಾಳಿಗೆ ಒಳಗಾಗಿದೆ. ಸೈಬರ್‌ ಸೆಕ್ಯುರಿಟಿ ಸಂಸ್ಥೆ ಕ್ಲೌಡ್‌ಸೆಕ್‌ನ ವರದಿಯ ಪ್ರಕಾರ 2022 ರಲ್ಲಿ ಭಾರತೀಯ ಸರ್ಕಾರಿ ಏಜೆನ್ಸಿಗಳ ಮೇಲೆ ಸೈಬರ್‌ದಾಕ್‌ಗಳು ದ್ವಿಗುಣಗೊಂಡಿದೆ. ಸೈಬರ್‌ಅಟ್ಯಾಕ್‌ಗಳ ಹೆಚ್ಚಳವನ್ನು ಗಮನಿಸಿದ ಕ್ಲೌಡ್‌ಸೆಕ್, ಈ ವಿಷಯದಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಗುರಿಯಾಗಿರುವ ದೇಶವಾಗಿದೆ ಎಂದು ಹೇಳಿದೆ. ಹ್ಯಾಕ್ಟಿವಿಸ್ಟ್‌ ಗಳ ಸೈಬರ್‌ ದಾಳಿಯು ಭಾರತನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡಿದೆ ಎಂಬುದನ್ನು ಈ ವರದಿ ತೆರೆದಿಟ್ಟಿದೆ. ಈ ಹೆಚ್ಚಳಕ್ಕೆ ಮಲೇಷ್ಯಾ ಮೂಲದ ಡ್ರ್ಯಾಗನ್ ಫೋರ್ಸ್ ಮತ್ತು ಹಲವಾರು ಇತರ ಹ್ಯಾಕರ್ ಗುಂಪುಗಳು ಪ್ರಾರಂಭಿಸಿದ ಸೈಬರ್‌ ಅಟ್ಯಾಕ್‌ ಅಭಿಯಾನ ಮುಖ್ಯ ಕಾರಣವೆಂದು ಹೇಳಲಾಗಿದೆ.

2021 ರಲ್ಲಿ, ಭಾರತದ ಒಟ್ಟಾರೆ ಸೈಬರ್‌ ದಾಳಿಗಳಲ್ಲಿ ಸರ್ಕಾರಿ ಏಜೆನ್ಸಿಗಳ ಮೇಲೆ ನಡೆದ ದಾಳಿಗಳ ಪ್ರಮಾಣವು 6.3ಶೇಕಡಾದಷ್ಟಿತ್ತು. ಆದರೆ 2022ರಲ್ಲಿ ಈ ಸಂಖ್ಯೆ 13.7ಶೇಕಡಾಗೆ ತಲುಪಿದೆ. ಜಾಗತಿಕವಾಗಿ ಸರ್ಕಾರಿ ಏಜೆನ್ಸಿಗಳ ಮೇಲಾದ ಸೈಬರ್‌ ದಾಳಿಯಲ್ಲಿ ಚೀನಾ, ಭಾರತ, ಯುಎಸ್‌ ಹಾಗು ಇಂಡೋನೇಷ್ಯಾಗಳು 40 ಶೇಕಡಾದಷ್ಟು ಪಾಲು ಹೊಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!