ಮೈಸೂರಿನಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ನಗರ ಪೊಲೀಸ್ ಆಯುಕ್ತ

ದಿಗಂತ ವರದಿ ಮೈಸೂರು:

ಸೈಬರ್ ಕ್ರೈಂ ಪ್ರಕರಣಗಳು ಮೈಸೂರಿನಲ್ಲಿ ದಿನೇ ದಿನೆ ಹೆಚ್ಚುತ್ತಿದ್ದು, ಸಾರ್ವಜನಿಕರು ಸೈಬರ್ ವಂಚನೆಗಳ ಬಗ್ಗೆ ಜಾಗೃತರಾಗಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಆನ್ ಲೈನ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜಾಬ್ ರಿಜಿಸ್ಟೆçಷನ್, ವೆರಿಫಿಕೇಷನ್ ಎಂದು ಹಣ ಹಾಕಿಸಿಕೊಂಡು ವಂಚಿಸುವುದು, ವಿದೇಶದಿಂದ ಗಿಫ್ಟ್ ಬಂದಿರುವುದಾಗಿ ಹೇಳಿ ಕಸ್ಟಮ್ಸ್ ಚಾರ್ಜ, ಜಿಎಸ್‌ಟಿ ಎಂದು ಹೇಳಿ ವಂಚಿಸುವುದು, ಮ್ಯಾಟ್ರಿಮೋನಿಯಲ್ಲಿ ವಿದೇಶದಲ್ಲಿ ವಧು-ವರ ಇರುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುವುದು, ಮೊಬೈಲ್‌ನಲ್ಲಿ ಪಾನ್‌ಕಾರ್ಡ್ ಆಪ್ಡೇಟ್, ಕೆವೈಸಿ ಆಪ್ಡೇಟ್ ಎಂದು ಹೇಳಿ ಲಿಂಕ್ ಕಳುಹಿಸಿ, ಮತ್ತು ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಪಡೆದು ವಂಚಿಸುವುದು.

ಆನ್ ಲೈನ್‌ನಲ್ಲಿ ಲೋನ್ ಪಡೆದು ತೀರಿಸಿದ ನಂತರ ಹೆಚ್ಚು ಹಣ ಕೇಳಿ ಪೀಡಿಸುವುದು ಕಂಡು ಬಂದಿದೆ. ವಾಟ್ಸ್ಅಪ್, ಇನ್ಸಾ÷್ಟಗ್ರಾಮ್‌ನಲ್ಲಿ ಹುಡುಗಿ ಪರಿಚಯವಾಗಿ ವಿಡಿಯೋ ಕಾಲ್ ಮಾಡಿ, ಅಶ್ಲೀಲ ವಿಡಿಯೋ ಫೋಟೊ ಪಡೆದುಕೊಂಡು, ರೆಕಾರ್ಡ್ ಮಾಡಿ ಹೆದರಿಸಿ ಹಣ ಪಡೆಯುವುದು. ಓಎಲ್‌ಎಕ್ಸ್, ಕ್ವಿಕರ್ ಆಪ್‌ಗಳಲ್ಲಿ ಆರ್ಮಿಯಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡು ಹಣ ಹಾಕಿಸಿಕೊಂಡು ವಂಚಿಸುವುದು. ಆರ್ಮಿ ಅವರ ಫೋಟೊ, ಪಾನ್ ಕಾರ್ಡ್ ಕಳುಹಿಸಿ ಗೂಗಲ್ ಪೇ ಫೋನ್ ಪೇ ಮೂಲಕ ವಂಚಿಸುವುದು.

ಇನ್ಸಾ÷್ಟಗ್ರಾಮ್,ಫೇಸ್ ಬುಕ್‌ನಲ್ಲಿ ಪರಿಚಯವಾಗಿ ಟ್ರೇಡಿಂಗ್ ಮಾಡಿ ಹಣ ಡಬಲ್ ಮಾಡುವುದಾಗಿ ಹೇಳಿ ವಂಚಿಸುವುದು. ಪೋಸ್ಟ್ ಮೂಲಕ ಮನೆಗೆ ಲಕ್ಕಿ ಡ್ರಾ ದುಬಾರಿ ಬೆಲೆಯ ಕಾರುಗಳು ಕಡಿಮೆ ಬೆಲೆಗೆ ಸಿಗುವ ವೋಚರ್‌ಗಳನ್ನು ಕಳುಹಿಸಿ ವಂಚಿಸುವುದು.ಏನಿಡೆಸ್ಕ್ ಮತ್ತು ಕ್ವಿಕ್ ಸಪೋರ್ಟ್ ಇತರೆ ಆಪ್‌ಗಳನ್ನು ಮೊಬೈಲ್ ಗೆ ಕಳುಯಿಸಿ ಇನ್ಟಾ÷್ಸಲ್ ಮಾಡುವಂತೆ ತಿಳಿಸಿ ಗ್ರಾಹಕರ ಬ್ಯಾಂಕ್ ಮಾಹಿತಿಯನ್ನು ಪಡೆದು ವಂಚಿಸುವುದು. ಸ್ಟಾಕ್ ಮಾರ್ಕೆಟ್ ಮತ್ತು ಕ್ರಿಪ್ಟೊ ಕರೆಸ್ಸಿಯಲ್ಲಿ ಹೂಡಿಕೆ ಮಾಡಿಸಿ ಅಧಿಕ ಲಾಭ ಕೊಡುವುದಾಗಿ ನಂಬಿಸಿ ವಂಚಿಸುವುದು ನಡೆಯುತ್ತಿದೆ.
ಹಾಗಾಗಿ ಮೈಸೂರು ನಗರ ವ್ಯಾಪ್ತಿಯ ಯಾವುದೇ ಸಾರ್ವಜನಿಕರಿಗೆ ಅನ್‌ಲೈನ್ ಮೂಲಕ ಬ್ಯಾಂಕ್ ಹಣ ವಂಚನೆಯಾದ್ದಲ್ಲಿ ಕೂಡಲೇ ಮೈಸೂರುನಗರದ ಸೆನ್ ಕ್ರೈಂ ಪೊಲೀಸ್ ಠಾಣೆಗೆ ಖುದ್ದು ಅಥವಾ ದೂರವಾಣಿ ಸಂಖ್ಯೆ 0821-2418598 ಗೆ ಸಂಪರ್ಕಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!