ಸೈಬರ್​ ಭದ್ರತೆ ಉಲ್ಲಂಘನೆ: 23 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳಿಗೆ ಗೇಟ್ ಪಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜುಲೈ ತಿಂಗಳಲ್ಲಿ ಭಾರತದಲ್ಲಿ ಸೈಬರ್​ ಭದ್ರತೆ ಉಲ್ಲಂಘಿಸಿದ ಆರೋಪದ ಮೇಲೆ 23 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್​ ಮಾಡಲಾಗಿದೆ.

ಜೊತೆಗೆ 3 ಲಕ್ಷ ಖಾತೆದಾರರಿಗೆ ನೋಟಿಸ್​ ನೀಡಲಾಗಿದೆ. ಇದು ಜೂನ್​ ತಿಂಗಳ ನಿಷೇಧಕ್ಕಿಂತಲೂ ಅಧಿಕವಾಗಿದ್ದು, ಆ ತಿಂಗಳು 22 ಲಕ್ಷ ಖಾತೆಗಳನ್ನು ವಾಟ್ಸ್​ಆ್ಯಪ್​ ನಿಷೇಧಿಸಿತ್ತು.

ಸುಳ್ಳು ಮಾಹಿತಿ ಹರಡುವಿಕೆ, ಸೈಬರ್​ ಭದ್ರತೆ ಉಲ್ಲಂಘನೆ, ನಿಂದನೆ, ದೇಶದ ಕಾನೂನು ಮತ್ತು ಕಂಪನಿಯ ನಿಮಯಗಳನ್ನು ಮೀರಿ ಹಾನಿಕಾರಕ ಸಂದೇಶ ರವಾನಿಸಿ ದುರುಪಯೋಗ ಮಾಡಿಕೊಂಡ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂತಹ ಖಾತೆಗಳನ್ನು ಹುಡುಕಿ ಬ್ಯಾನ್​ ಮಾಡಲಾಗಿದೆ.

ವಾಟ್ಸ್​ಆ್ಯಪ್​ ಕಂಪನಿಗೆ ದೂರು ನೀಡಿ:
ನಿಮಗೆ ವಾಟ್ಸ್​ಆ್ಯಪ್​ನಿಂದ ತೊಂದರೆ ಉಂಟು ಮಾಡುವ ಖಾತೆಗಳ ಬಗ್ಗೆ ಕಂಪನಿಗೆ ದೂರು ನೀಡುವ ಅವಕಾಶ ನೀಡಲಾಗಿದೆ. ಜನರು [email protected]ಗೆ ದೂರಿನ ಇಮೇಲ್ ಮಾಡಬಹುದು. ಇದಲ್ಲಿ ಆ ಖಾತೆಯೊಂದಿಗೆ ನಿಮಗಾದ ತೊಂದರೆ ಬಗ್ಗೆ ಅದರಲ್ಲಿ ನಮೂದಿಸಬೇಕು. ಇದಕ್ಕೆ ಪುರಾವೆಯಾಗಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳಿ.

ಇದಲ್ಲದೇ ತೊಂದರೆ ನೀಡುವ ಖಾತೆಯನ್ನು ನೀವೇ ಸ್ವತಃ ಬ್ಲಾಕ್​ ಮಾಡಬಹುದು. ಬಳಿಕ ಈ ಬಗ್ಗೆ ಕಂಪನಿಗೆ ದೂರು ನೀಡಿ. ಈ ವೇಳೆ ಕಂಪನಿ ಚಾಟ್‌ನ ಕೊನೆಯ ಐದು ಸಂದೇಶಗಳನ್ನು ಹಂಚಿಕೊಳ್ಳಲು ತಿಳಿಸುತ್ತದೆ. ನೀವು ದೂರು ನೀಡಿದ ಖಾತೆ, ಗುಂಪಿನ ಹೆಸರನ್ನು ತಿಳಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!