ಸಮುದ್ರದಲ್ಲಿ ತೇಲಿಬಂದ ಬಂಗಾರದ ರಥ, ಆಶ್ಚರ್ಯಚಕಿತರಾದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಅವಾಂತರ ಸೃಷ್ಟಿಸುತ್ತಿದೆ. ಕರಾವಳಿ ಪ್ರದೇಶದಲ್ಲಿ ಸಮುದ್ರದ ಅಲೆಗಳು ರಕ್ಕಸ ರೂಪದಲ್ಲಿ ದಡಕ್ಕೆ ಅಪ್ಪಳಿಸುತ್ತಿವೆ. ಚಂಡಮಾರುತದ ರಭಸಕ್ಕೆ ಸಂತಬೊಮ್ಮಲಿ ಸುನ್ನಪಲ್ಲಿ ಬಂದರಿಗೆ ರಥವೊಂದು ತೇಲಿಬಂದಿದೆ. ಚಿನ್ನದ ಬಣ್ಣದಿಂದ ಕೂಡಿದ ರಥ ಹೊಂಬಣ್ಣದಿಂದ ಮಿನುಗುತ್ತಿದೆ. ತೇಲಿಬಂದ ರಥ ನೋಡಲು ಸ್ಥಳೀಯರು ಸಾಲು ಸಾಲಾಗಿ ಸಮುದ್ರ ತೀರಕ್ಕೆ ಬಂದಿದ್ದಾರೆ.

ಕೊಚ್ಚಿ ಬಂದ ರಥದ ಮೇಲೆ 16-1-2022 ಎಂದು ಅನ್ಯ ಭಾಷೆಯಲ್ಲಿ ಬರೆಯಲಾಗಿದೆ. ಮಲೇಷ್ಯಾ, ಥಾಯ್ಲೆಂಡ್ ಅಥವಾ ಜಪಾನ್ ದೇಶಕ್ಕೆ ಸೇರಿದ್ದಿರಬಹುದು ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ದಡಕ್ಕೆ ಬಂದ ಚಿನ್ನದ ರಥವನ್ನು ಮೆರೈನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಥ ಎಲ್ಲಿಂದ ಬಂತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಸಮುದ್ರದಲ್ಲಿ ತೇಲಿ ಬರುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!