ಆತ್ಮಹತ್ಯೆ ಮಾಡಿಕೊಳ್ಳಲು ಟವರ್‌ ಹತ್ತಿದ್ದ ಮಹಿಳೆ ಕೆಳಗಿಳಿಯುವಂತೆ ಮಾಡಿದ ಕಣಜಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೊಬೈಲ್ ಟವರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಕೇರಳದ ಮಹಿಳೆಯೊಬ್ಬರು ಸುತ್ತಲೂ ಕಣಜಗಳು ನುಗ್ಗಿದ್ದರಿಂದ ಗಾಬರಿಗೊಂಡು ಬೆದರಿ ಟವರ್‌ ನಿಂದ ಕೆಳಗಿಳಿದ ಘಟನೆ ಕೇರಳದ ತಿವನಂತಪುರಂ ನಲ್ಲಿ ನಡೆದಿದೆ.
ಈ ಮಹಿಳೆಯ ಮಗುವನ್ನು ಆಕೆಯ ಪತಿ ಕಸಿದುಕೊಂಡು ಹೋಗಿದ್ದ. ಇದರಿಂದ ಆಕ್ರೋಶಗೊಂಡಿದ್ದ ಮಹಿಳೆ ಸೋಮವಾರ ಸಂಜೆ ಆಲಪ್ಪುಳದ ಕರಾವಳಿಯ ಕಯಂಕುಲಂನಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಅನ್ನು ಏರಿದ್ದಳು. ಪತಿ ಕೊಂಡೊಯ್ದ ಮಗುವನ್ನು ವಾಪಸ್ ಕೊಡದಿದ್ದರೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ. ಆಕೆಯನ್ನು ಕೆಳಗಿಳಿಯುವಂತೆ ಮನವೊಲಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಪ್ರಯತ್ನಗಳು ವಿಫಲವಾಗಿದೆ.
ಆದರೆ ಮಹಿಳೆ ಮೊಬೈಲ್ ಟವರ್‌ನ ಮೇಲಕ್ಕೆ ಹತ್ತುವಲ್ಲಿ ನಿರತರಾಗಿದ್ದಾಗ ಆಕೆ ಕಣಜದ ಗೂಡೊಂದಕ್ಕೆ ಅಡ್ಡಿಪಡಿಸಿದ್ದರು. ಇದರಿಂದಾಗಿ ಇದ್ದಕ್ಕಿದ್ದಂತೆ ಕಣಜಗಳು ಅವಳ ಸುತ್ತಲೂ ಮುತ್ತಿಕೊಂಡು ಅವಳನ್ನು ಕುಟುಕಲಾರಂಭಿಸಿದವು. ಗಾಬರಿಯಿಂದ ಮಹಿಳೆ ವೇಗವಾಗಿ ಟವರ್‌ ನಿಂದ ಕೆಳಗಿಳಿಯಲು ಪ್ರಾರಂಭಿಸಿದಳು.. ಕಣಜಗಳು ತನ್ನ ಸುತ್ತಲೂ ಹಿಂಡು ಹಿಂಡಾಗಿ ಮುತ್ತಿಕೊಂಡಾಗ ಕಿರುಚಿದಳು. ನೆಲದ ಸಮೀಪದಲ್ಲಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಭದ್ರವಾಗಿ ಹಿಡಿದಿದ್ದ ಸುರಕ್ಷತಾ ಜಾಲದ ಮೇಲೆ ಕೆಲವು ಅಡಿಗಳ ಮೇಲಿನಿಂದ ಹಾರಿದಳು. ಕಣಜಗಳು ಇಲ್ಲದೇ ಇದ್ದಿದ್ದರೆ ಆಕೆ ಕೆಳಗಿಳಿಯಲು ಒಪ್ಪುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ನಿವಾಸಿಯಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಯಂಕುಲಂನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿದೆ. ಆಕೆಯ ಪತಿ ಅಥವಾ ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಮಹಿಳೆ ಚೇತರಿಸಿಕೊಂಡ ಮೇಲೆ ವೈಯಕ್ತಿಕ ವಿವರಗಳನ್ನು ಪಡೆಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!