October 11, 2026
Sunday, October 11, 2026
spot_img

‘ಮೋಂಥಾ’ ಸೈಕ್ಲೋನ್ ಎಂಟ್ರಿ: ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆಯ ಮುನ್ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದ ‘ಮೋಂಥಾ’ ಸೈಕ್ಲೋನ್ ಎಂಟ್ರಿ ಕೊಟ್ಟಿದ್ದು, ಮುಂದಿನ ಎರಡ್ಮೂರು ದಿನಗಳ ಕಾಲ ಚೈನ್ನೈನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಸಿದೆ.

ಇಂದು ಆಗ್ನೇಯ ಭಾಗದಲ್ಲಿ ಒತ್ತಡ ಸೃಷ್ಟಿಯಾಗಲಿದೆ. ನಾಳೆ ಇದು ಇನ್ನಷ್ಟು ತೀವ್ರಗೊಳ್ಳಲಿದೆ. ಚಂಡಮಾರುತ ಪರಿಣಾಮವಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಅ.28ರವರೆಗೂ ಮಳೆ ಮುಂದುವರಿಯಲಿದೆ.

ಈ ಚಂಡಮಾರುತಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಶಿಫಾರಸಿನಂತೆ ಥಾಯ್ಲೆಂಡ್‌ನ ಮೊಂಥಾ ಎಂಬ ಹೆಸರು ಇಡಲಾಗಿದೆ. ಅ.27ರಂದು ಚೆನ್ನೈ, ತಿರುವಲ್ಲೂರು ಮತ್ತು ರಾಣಿಪೇಟೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Must Read