ಪಂಚರತ್ನ ಯಾತ್ರೆ ವೇಳೆ ಕುಸಿದು ಬಿದ್ದ ಶಾಸಕ ಡಿ.ಸಿ. ತಮ್ಮಣ್ಣ!

ಹೊಸದಿಗಂತ ವರದಿ,ಮದ್ದೂರು :

ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ಬುಧವಾರ ನಡೆದ ಪಂಚರತ್ನ ಯಾತ್ರೆ ವೇಳೆ ಶಾಸಕ ಡಿ.ಸಿ. ತಮ್ಮಣ್ಣ ದಿಢೀರ್ ಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ಜರುಗಿತು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೆ.ಎಂ. ದೊಡ್ಡಿಯ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ರಥಯಾತ್ರೆಯಲ್ಲಿ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ, ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಸುಡುಬಿಸಿಲಿನಿಂದ ಬಸವಳಿದಿದ್ದ ಶಾಸಕ ಡಿ.ಸಿ. ತಮ್ಮಣ್ಣ ರಥಯಾತ್ರೆಯಲ್ಲಿ ಕುಸಿದುಬಿದ್ದರು. ನಂತರ ಸ್ಥಳದಲ್ಲಿದ್ದ ತಮ್ಮಣ್ಣ ಪುತ್ರಿ ಡಾ. ಸೌಮ್ಯ ಹಾಗೂ ರಥಯಾತ್ರೆಯ ಜೊತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಬಂದಿದ ವೈದ್ಯಕೀಯ ಸಿಬ್ಬಂದಿಗಳು ತಮ್ಮಣ್ಣ ಅವರ ರಕ್ತದೊತ್ತಡ ಮತ್ತು ಸಕ್ಕರೆ ಅಂಶ ಪರಿಶೀಲನೆ ನಡೆಸಿ ನೀರು ಕುಡಿಸಿದ್ದಾರೆ. ಅವರ ಆರೋಗ್ಯದಲ್ಲಿ ಸಾಮಾನ್ಯ ಸ್ಥಿತಿ ಇದ್ದುಘಿ, ಯಾವುದೇ ಆತಂಕವಿರಲಿಲ್ಲಘಿ. ಸುಡು ಬಿಸಿಲಿನಿಂದ ಅವರಿಗೆ ಈ ಪರಿಸ್ಥಿತಿ ಉಂಟಾಗಿದೆ ಎಂದು ತಪಾಸಣೆ ನಂತರ ತಿಳಿದುಬಂತು.
ನಂತರ ಚೇತರಿಸಿಕೊಂಡ ಶಾಸಕ ತಮ್ಮಣ್ಣ ಕಾರ‌್ಯಕರ್ತರತ್ತ ಕೈ ಬೀಸಿ ನಗೆ ಬೀರಿದರು.
ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ವೇದಿಕೆ ನಿರ್ಮಾಣ ಹಾಗೂ ಹಳ್ಳಿಗಳಿಂದ ಕಾರ‌್ಯಕರ್ತರನ್ನು ಕರೆತರುವ ಸಿದ್ಧತೆ ಇದ್ದ ಕಾರಣ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ್ದರು. ಇದರಿಂದಾಗಿ ಅವರು ಅಸ್ವಸ್ಥಗೊಳ್ಳಲು ಕಾರಣವೆಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!