ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಒತ್ತಾಯಿಸಿ ನಾಳೆ ಕರೆದ ಜಾಥಾ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದ್ದು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯಿಸಿ ನಾಳೆ ಒಕ್ಕಲಿಗರ ಸಂಘದಿಂದ ಕರೆ ನೀಡಲಾಗಿದ್ದ ಜಾಥಾ ರದ್ದುಗೊಳಿಸಲಾಗಿದೆ.

ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂಬ ಉದ್ದೇಶಕ್ಕೆ ನಾಳೆ ಒಕ್ಕಲಿಗರ ಸಂಘದಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.ಆದರೆ ಕೊನೇ ಕ್ಷಣದಲ್ಲಿ ಜಾಥಾ ರದ್ದುಗೊಂಡಿದೆ.

ನಾಳೆ ಹಮ್ಮಿಕೊಳ್ಳಲಾಗಿದ್ದ ಹೋರಾಟವನ್ನು ರದುಗೊಳಿಸಲಾಗಿದೆ ಎಂದು ಕಿಮ್ಸ್ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ ಅಧ್ಯಕ್ಷ ಉಮಾಪತಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!