ನಿಧಾನಗತಿಯ ಬೌಲಿಂಗ್: ಕೆಕೆಆರ್ ನಾಯಕ ರಾಣಾಗೆ ಬಿತ್ತು 24 ಲಕ್ಷ ಫೈನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೆನ್ನೈ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ನಿತೀಶ್ ರಾಣಾ ಅವರು ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ದಂಡದ ಬಿಸಿ ಅನುಭವಿಸಿದ್ದಾರೆ.

ಐಪಿಎಲ್​ ಆಡಳಿತ ಮಂಡಳಿ 24 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅದೇ ರೀತಿ ತಂಡದ ಇತರ ಆಟಗಾರರಿಗೂ ತಲಾ 6 ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡುವಂತೆ ಸೂಚಿಸಲಾಗಿದೆ.

ಸಿಎಸ್​ಕೆ ವಿರುದ್ಧ ಕೆಕೆಆರ್​ ಗೆಲುವು ಸಾಧಿಸಿತು. ಆದರೆ, ಗೆಲುವಿನ ನಡುವೆಯೂ ಕೆಕೆಆರ್​ ತಂಡ ನಿಧಾನಗತಿಯ ಬೌಲಿಂಗ್​ ಕಾಯ್ದುಕೊಂಡಿತ್ತು. ಈ ತಪ್ಪಿಗಾಗಿ ರಾಣಾಗೆ ದಂಡ ವಿಧಿಸಲಾಗಿದೆ.

ನಿಧಾನಗತಿಯ ಓವರ್ ರೇಟ್ ತಪ್ಪುಗಳಿಗೆ ಸಂಬಂಧಿಸಿದ ಐಪಿಎಲ್​ನ ನಿಯಮದ ಅಡಿಯಲ್ಲಿ, ಕೆಕೆಆರ್​ ತಂಡ ಎರಡನೇ ಬಾರಿ ಈ ತಪ್ಪು ಮಾಡುತ್ತಿದೆ. ಹೀಗಾಗಿ ನಾಯಕ ನಿತೀಶ್ ರಾಣಾ ಅವರಿಗೆ 24 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಅಲ್ಲದೆ, ಇಂಪ್ಯಾಕ್ಟ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್​ನ ಪ್ರತಿಯೊಬ್ಬ ಸದಸ್ಯನಿಗೂ 6 ಲಕ್ಷ ರೂ.ಅಥವಾ ಪಂದ್ಯದ ಶುಲ್ಕದ 25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!