ಮೂರನೇ ತ್ರೈ ಮಾಸಿಕದಲ್ಲಿ 6.71 ಶೇಕಡಾ ಹೆಚ್ಚಿನ ಲಾಭ ಗಳಿಸಿದ ಡಿ-ಮಾರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಪ್ರಮುಖ ಚಿಲ್ಲರೆ ಮಾರಾಟಗಾರರಲ್ಲೊಂದಾದ ಡಿಮಾರ್ಟ್‌ ತನ್ನ ಮೂರನೇ ತ್ರೈಮಾಸಿಕದ ಲಾಭದಲ್ಲಿ 6.71 ಶೇಕಡಾ ಹೆಚ್ಚಳವನ್ನು ವರದಿ ಮಾಡಿದೆ. ಸಗಟು ಮಾರಾಟ ಸರಪಳಿ ಹೊಂದಿರುವ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್, ಡಿಸೆಂಬರ್ 31, 2022 ರಂದು ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ 589.64 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ. ಇದು ಕಳೆದ ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 552.53 ಕೋಟಿ ರೂ.ಗಳಷ್ಟಿತ್ತು. ಈ ತ್ರೈಮಾಸಿಕದ ಏಕೀಕೃತ
ಲಾಭದಲ್ಲಿ 6.71 ಶೇಕಡಾದಷ್ಟು ಹೆಚ್ಚಳ ದಾಖಲಾಗಿದೆ.

ಇದಲ್ಲದೇ ತ್ರೈಮಾಸಿಕ ಕಾರ್ಯಾಚರಣೆಗಳಿಂದ ಆದಾಯವು 25.50 ಶೇಕಾಡಷ್ಟು ಏರಿಕೆಯಾಗಿ 11,569.05 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ಕಳೆದ ವರ್ಷದಲ್ಲಿ 9,217.76 ಕೋಟಿ ರೂಪಾಯಿಗಳಷ್ಟಿತ್ತು ಎಂದು ಕಂಪನಿಯ ಫೈಲಿಂಗ್‌ ತಿಳಿಸಿದೆ.

ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಒಟ್ಟು ವೆಚ್ಚಗಳು FY2022-23 ರ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 27.02 ರಷ್ಟು ಏರಿಕೆಯಾಗಿದ್ದು 10,788.86 ಕೋಟಿ ರೂ.ಗಳಿಗೆ ತಲುಪಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 8,493.55 ಕೋಟಿ ರೂ.ಗಳಷ್ಟಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!