ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವ : 2ನೇ ದಿನದ ‘ಗ್ರಾಮ ವಿಕಾಸ ಯಾತ್ರೆ’ ಆರಂಭ

ಹೊಸದಿಗಂತ ವರದಿ ಬಂಟ್ವಾಳ:

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತ್ರತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಜ.14 ರಿಂದ ಜ.26 ರ ವರೆಗೆ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ , ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯ ಎರಡನೇಯ ದಿನವಾದ ಜ.15 ರಂದು ಬೆಳಿಗ್ಗೆ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರ ನಂದಾವರದಿಂದ ಪ್ರಾರಂಭವಾಯಿತು.

ಆರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ನಂದಾವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು . ನಂದಾವರದಿಂದ ಹೊರಟ ಪಾದಯಾತ್ರೆ , ಮಂಚಿ,ಸಾಲೆತ್ತೂರು,ಕೊಳ್ನಾಡು ಬಳಿಕ ವಿಟ್ಲಪಡ್ನೂರುವಿನಲ್ಲಿ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ.

ವಂದೇ ಮಾತರಂ ಗೀತೆಯ ಬಳಿಕ ಪಾದಯಾತ್ರೆಯನ್ನು ಆರಂಬಿಸಿದರು. ಶಾಸಕ ರಾಜೇಶ್ ನಾಯ್ಕ್ ಅವರು ಪಾದಯಾತ್ರೆ ಪ್ರಾರಂಭ ಮಾಡುವ ಮುನ್ನ ಭೂಮಿಯನ್ನು ಮುಟ್ಟಿ ನಮಸ್ಕರಿಸಿ ಬಳಿಕ ಮುಂದೆ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮುಂಬಯಿ ಮಹಾನಗರ ಪಾಲಿಕೆ ಸದಸ್ಯ ಸಂತೋಷ್ ಶೆಟ್ಟಿ ದಳಂದಿಲ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ದೇವದಾಸ ಶೆಟ್ಟಿ, ಮಾದವ ಮಾವೆ, ಸುದರ್ಶನ್ ಬಜ, ಸುಲೋಚನ ಭಟ್, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ,ಪ್ರಕಾಶ್ ಅಂಚನ್, ಗಣೇಶ್ ಸುವರ್ಣ, ಸಂತೋಷ್ ರಾಯಿಬೆಟ್ಟು, ಉದಯ ಪೂಜಾರಿ ಕಾಂಜಿಲ, ರವೀಶ್ ಶೆಟ್ಟಿ ಕರ್ಕಳ, ಅರವಿಂದ ಭಟ್, ರಮನಾಥ ರಾಯಿ, ಡೊಂಬಯ್ಯ ಅರಳ, ಸೀತಾರಾಮ ಫುಜಾರಿ, ಉಮೇಶ್ ಅರಳ, ಸುರೇಶ್ ಕೋಟ್ಯಾನ್, ಯಶೋಧರ ಕರ್ಬೆಟ್ಟು, ಪುರುಷ ಸಾಲಿಯಾನ್, ಜನಾರ್ದನ ಬೊಂಡಾಲ, ವಿರೇಂದ್ರ ಕುಲಾಲ್, ಜಯಶಂಕರ್ ಬಾಸ್ರಿತ್ತಾಯ, ಶರ್ಮಿತ್ ಜೈನ್, ಲೋಹಿತ್ ಅಗರಿ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು,ರೋನಾಲ್ಡ್ ಡಿ.ಸೋಜ,ಶಾಂತಪ್ಪ ಪೂಜಾರಿ , ಧನಂಜಯ ಶೆಟ್ಟಿ , ಕೃಷ್ಣಪ್ಪ ಪೂಜಾರಿ ದೋಟ,ವಜ್ರನಾಥ ಕಲ್ಲಡ್ಕ, ರೂಪೇಶ್ ಆಚಾರ್ಯ, ಸುಪ್ರಿತ್ ಅಳ್ವ, ಪುಷ್ಪರಾಜ ಚೌಟ, ಚರಣ್ ಜುಮಾದಿಗುಡ್ಡೆ, ಸೀಮಾಮಾದವ, ಯಶವಂತ ದೇರಾಜೆ, ಭಾರತಿ ಚೌಟ, ಪ್ರವೀಣ್ ಗಟ್ಟಿ, ಇದಿನಬ್ಬ, ಸಂದೀಪ್ ಮಾರ್ನಬೈಲು, ಯಶವಂತ ನಗ್ರಿ, ಗಣೇಶ್ ಕುಲಾಲ್, ನವೀನ್ ಕಂದೂರು, ಅರವಿಂದ ರೈ, ಅನಿತಾ, ಲಖಿತಾ ಆರ್ ಶೆಟ್ಟಿ, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!