ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಆಧ್ಯಾತ್ಮಿಕ ಗುರುಗಳಾದ ರವಿಶಂಕರ್ ಗುರೂಜಿ ಅವರು ಡಿಸೆಂಬರ್ 21, ಶನಿವಾರ ಜಾಗತಿಕ ಧ್ಯಾನವನ್ನು ನಡೆಸಿಕೊಡಲಿದ್ದಾರೆ. ಇದರ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಡಿಸೆಂಬರ್ 21 ಅನ್ನು ‘ವಿಶ್ವ ಧ್ಯಾನ ದಿನ’ವನ್ನಾಗಿ ಘೋಷಿಸಿ, ಇದನ್ನು ಸರ್ವಾನುಮತದಿಂದ ಅನುಮೋದಿಸಲಾಗುವುದು.
ಇನ್ಮುಂದೆ ಈ ಐತಿಹಾಸಿಕ ದಿನ ಪ್ರತಿ ವರ್ಷದ ನಡೆಯಲಿರುವ ಜಾಗತಿಕ ಧ್ಯಾನದ ಆಚರಣೆಯ ಉತ್ಸವಕ್ಕೆ ನಾಂದಿಯಾಗಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿವರ್ತನಕಾರಕವಾದ ಲಾಭಗಳನ್ನು ಬೀರುವ ಮತ್ತು ಶಾಂತಿ ಹಾಗೂ ಐಕ್ಯತೆಯನ್ನು ಪೋಷಿಸುವ ಧ್ಯಾನದಿಂದ ಆಗುವ ಪ್ರಯೋಜನಗಳನ್ನು ಗುರುತಿಸಿದಂತಾಗುತ್ತದೆ.
ವಿಶ್ವ ಸಂಸ್ಥೆಯಲ್ಲಿ ಭಾಷಣ
ನ್ಯೂಯಾರ್ಕ್ ನ ವಿಶ್ವ ಸಂಸ್ಥೆಯ ‘ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ’ ಡಿಸೆಂಬರ್ 21 ರಂದು ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನದ ದಿನದ ಆಚರಣೆಗೆ ಸಿದ್ಧವಾಗುತ್ತಿದೆ. ಈ ಮಹತ್ವಪೂರ್ಣ ದಿನದಂದು ಗುರುದೇವ್ ಶ್ರೀ ಶ್ರೀ ರವಿಶಂಕರರು ವಿಶ್ವ ಸಂಸ್ಥೆಯಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಪ್ರಮುಖವಾದ ದಿನವನ್ನು “ವಿಶ್ವ ಶಾಂತಿ ಹಾಗೂ ಸಾಮರಸ್ಯಕ್ಕಾಗಿ ಧ್ಯಾನ” ಎಂದು ಕರೆಯಲಾಗಿದೆ.
ಈ ಬಗ್ಗೆ ಮಾತನಾಡಿದ ರವಿಶಂಕರ್ ಗುರೂಜಿ ಅವರು,, ವಿಶ್ವ ಸಂಸ್ಥೆಯು, ಧ್ಯಾನವನ್ನು ಗುರುತಿಸಿ ಒಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ಧ್ಯಾನವು ಆತ್ಮವನ್ನು ಪೋಷಿಸುತ್ತದೆ, ಮನಸ್ಸನ್ನು ಪ್ರಶಾಂತಗೊಳಿಸುತ್ತದೆ, ಆಧುನಿಕತೆಯ ಸವಾಲುಗಳಿಗೆ ಪರಿಹಾರವನ್ನು ನೀಡುತ್ತದೆ ಎಂದರು.
ಜಾಗತಿಕ ನೇರ ಪ್ರಸಾರ
ಡಿಸೆಂಬರ್ 21ರಂದು ಗುರುದೇವರು ವಿಶ್ವ ಧ್ಯಾನ ದಿನ ಅಂಗವಾಗಿ, ಧ್ಯಾನವನ್ನು ಮಾರ್ಗದರ್ಶಿಸಲಿದ್ದಾರೆ. ಇದು ಜಾಗತಿನಾದ್ಯಂತ ನೇರ ಪ್ರಸಾರಗೊಳಲಿದೆ. ಅಂದು ಧನುರ್ಮಾಸದ ಈ ಪುಣ್ಯಕಾಲವು, ಸ್ವಾಧ್ಯಾಯ ಮತ್ತು ಪುನಶ್ಚೇತನಕ್ಕೆ ಶುಭ ಸಮಯ ಎಂದು ಪರಿಗಣಿಸಲಾಗಿದೆ.