September 1, 2026
Tuesday, September 1, 2026
spot_img

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ದಾದಾ’: ಹೊಸ ಅವತಾರದಲ್ಲಿ ಸೌರವ್ ಗಂಗೂಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಮತ್ತೊಂದು ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2026ರಿಂದ ಆರಂಭವಾಗಲಿರುವ ‘ಬಿಗ್ ಬಾಸ್ ಬಾಂಗ್ಲಾ’ ಕಾರ್ಯಕ್ರಮದ ನಿರೂಪಕರಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಮೊದಲ ಬಾರಿಗೆ ಬಿಗ್ ಬಾಸ್‌ಗೆ ದಾದಾ

ಕ್ರಿಕೆಟ್ ಹಾಗೂ ದೂರದರ್ಶನ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿರುವ ಗಂಗೂಲಿ, ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಸ್ಪರ್ಧಿಗಳ ಪ್ರಯಾಣಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾದ ಬಳಿಕ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ:

ಎಲ್ಲಿ ವೀಕ್ಷಿಸಬಹುದು?

ಬಿಗ್ ಬಾಸ್ ಬಾಂಗ್ಲಾ ಕಾರ್ಯಕ್ರಮವು ಸ್ಟಾರ್ ಜಲ್ಸಾ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಡಿಜಿಟಲ್ ವೀಕ್ಷಕರಿಗೆ ಜಿಯೋಹಾಟ್‌ಸ್ಟಾರ್‌ನಲ್ಲಿ ಲಭ್ಯವಾಗಲಿದೆ. ಹಬ್ಬದ ಸೀಸನ್‌ನಲ್ಲೇ ಹೊಸ ಆವೃತ್ತಿ ಆರಂಭವಾಗಲಿದೆ.

6 ಭಾಷೆಗಳಲ್ಲಿ ಬಿಗ್ ಬಾಸ್ ಸಂಭ್ರಮ

ಈ ಬಾರಿ ಜಿಯೋಸ್ಟಾರ್ ನೆಟ್‌ವರ್ಕ್ ಮೂಲಕ ಬಿಗ್ ಬಾಸ್ 6 ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ, ಮಲಯಾಳಂನಲ್ಲಿ ಮೋಹನ್‌ಲಾಲ್ ಹಾಗೂ ಬಾಂಗ್ಲಾದಲ್ಲಿ ಸೌರವ್ ಗಂಗೂಲಿ ಕಾರ್ಯಕ್ರಮದ ನಿರೂಪಕರಾಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !