Friday, March 31, 2023

Latest Posts

ಕಾಂತಾರ ತಂದ ಸಕ್ಸಸ್ : ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವದಿಂದ ಪ್ರಶಸ್ತಿ ಲಭಿಸಿದೆ.

ದಾದಾ ಸಾಹೇಬ್ ಅಂತಾರಾಷ್ಟ್ರೀಯ ಸಿನಿಮೋತ್ಸವದ 2023ನೇ ಸಾಲಿನಲ್ಲಿ ರಿಷಬ್‌ಗೆ ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಅವಾರ್ಡ್ ದೊರಕಿದ್ದು, ಈ ಚಿತ್ರೋತ್ಸವದ ಈ ಬಾರಿಯ ಸಮಾರಂಭ ಇನ್ನಷ್ಟೇ ನಡೆಯಬೇಕಿದೆ.

ಅಂದಹಾಗೆ, ದಾದಾ ಸಾಹೇಬ್ ಫಾಲ್ಕೆ ಹೆಸರಲ್ಲಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೂ ಇದಕ್ಕೂ ಸಂಬಂಧವಿಲ್ಲ. ಇದು ದಾದಾ ಸಾಹೇಬ ಫಾಲ್ಕೆ ಹೆಸರಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಸುವವರು ನೀಡುವ ಪ್ರಶಸ್ತಿ.

ಕಾಂತಾರ ಸಿನಿಮಾ ರಿಷಬ್ ವೃತ್ತಿ ಜೀವನದಲ್ಲಿ ಅತ್ಯಂತ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಾಗಲಾರದು, ಕನ್ನಡದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರುಮಾಡಿದ್ದು, ಆಸ್ಕರ್ ನಾಮಿಷೇನ್‌ವರೆಗೂ ಸ್ಪರ್ಧಿಸಿದ್ದು ಕನ್ನಡಿಗರ ಹೆಮ್ಮೆಯಾಗಿದೆ.

ಕೋಟಿ ಕೋಟಿ ಬಾಚಿದ ಸಿನಿಮಾ ಎಲ್ಲಾ ರೆಕಾರ್ಡ್‌ಗಳನ್ನು ಹಿಂದಿಕ್ಕಿತ್ತು. ಇದೀಗ ರಿಷಬ್ ಪ್ರಶಸ್ತಿಗೆ ಭಾಜನರಾಗಿದ್ದು, ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!