Tuesday, March 28, 2023

Latest Posts

MUST READ | ಚಂದಾಮಾಮ ತೋರಿಸಿ ಊಟ ತಿನ್ನಿಸೋ ಬದಲು, ಊಟದ ಬಗ್ಗೆ ಪ್ರೀತಿ ಬರಿಸಿ..

ಮಕ್ಕಳಿಗೆ ಊಟ ತಿಂಡಿ ತಿನಿದೋದು ದೊಡ್ಡ ಸವಾಲು ಅದರಲ್ಲಿಯೂ ನಡೆದಾಡೋಕೆ ಶುರು ಮಾಡಿದ ಮಕ್ಕಳನ್ನು ಒಂದು ಕಡೆ ಕೂರಿಸಿ ತಿನ್ನಿಸೋದು ದೊಡ್ಡ ವಿಷಯ ಹೌದು. ಕಥೆ ಹೇಳಿ, ಟಿವಿ ತೋರಿಸಿ, ಹೆದರಿಸಿ, ಹೊಡೆದು, ಡಿಸ್ಟ್ರಾಕ್ಷನ್ ಮೂಡಿಸಿ ತಿನ್ನಿಸುವ ಬದಲು ಮಕ್ಕಳಿಗೆ ಊಟದ ಬಗ್ಗೆ ಆಸಕ್ತಿ ಬರೋ ಹಾಗೆ ಮಾಡಿ ಅದಕ್ಕೆ ಕೆಲ ಟಿಪ್ಸ್ ಇಲ್ಲಿದೆ…

  • ಒಂದು ವರ್ಷಕ್ಕಿಂತ ಸಣ್ಣ ಮಕ್ಕಳಿಗೂ ಅವರ ಕೈಗೆ ಆಹಾರ ನೀಡಿ, ಊಟ, ತಿಂಡಿ ಸಮಯ ನಿಗದಿ ಮಾಡಿ.
  • ಬೇರೆ ಬೇರೆ ಬಣ್ಣಗಳ, ಶೇಪ್‌ಗಳ ಆಹಾರ ನೀಡಿ.
  • ಒಂದೇ ಬೌಲ್, ಒಂದೇ ತಟ್ಟೆ ಬೇಡ, ಬಗೆಬಗೆಯ ವಿಭಿನ್ನವಾದ ವಸ್ತುಗಳಲ್ಲಿ ಊಟ ಕೊಡಿ.
  • ತಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ ಎನ್ನುವ ಅರಿವು ಅವರಿಗಿರಲಿ. ಹೊಲ ಗದ್ದೆಗಳಿಗೆ ಕರೆದುಕೊಂಡು ಹೋಗಿ.
  • ಸೂಪರ್ ಮಾರ್ಕೆಟ್‌ಗಳಿಗೆ ಕರೆದುಕೊಂಡು ಹೋಗಿ, ಗೋಧಿ, ರಾಗಿ ಅಕ್ಕಿ ತಿಂಡಿಯಾಗೋ ಮುನ್ನ ಹೇಗಿರುತ್ತದೆ ತೋರಿಸಿ.
  • ಅಡುಗೆ ಮನೆಯಲ್ಲಿ ಅವರನ್ನು ಸೇರಿಸಿಕೊಳ್ಳಿ, ಸಣ್ಣ ಪುಟ್ಟ ಕೆಲಸ ಮಾಡಿಸಿ.
  • ಊಟ ಹೆಚ್ಚಾಯ್ತು, ಅಥವಾ ತಿನ್ನೋಕೆ ಇಷ್ಟ ಇಲ್ಲ ಎಂದರೆ ಫೋರ್ಸ್ ಮಾಡಬೇಡಿ, ಫೋರ್ಸ್ ಮಾಡಿದರೆ ಊಟ ಕಂಡು ಹೆದರುತ್ತಾರೆ.
  • ಊಟದ ಜತೆ ಪಾಸಿಟಿವ್ ರಿಲೇಷನ್‌ಶಿಪ್ ಬರಲಿ, ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!