ದಿನಭವಿಷ್ಯ: ಬಹಳ ದಿನದಿಂದ ನಿರೀಕ್ಷೆಯಲ್ಲಿರುವ ಉದ್ಯೋಗಾವಕಾಶ ಇಂದು ಪ್ರಾಪ್ತವಾಗಲಿದೆ

ಮೇಷ
ಮೌನವಾಗಿ ಕಠಿಣ ಸಾಧನೆ ಮಾಡಿ. ಯಶ ನಿಶ್ಚಿತ. ಬದುಕಲ್ಲಿ ಖುಷಿ ಕಾಣುವ ಬೆಳವಣಿಗೆ ಸಂಭವಿಸಲಿದೆ. ಪ್ರೀತಿಯ ವಿಷಯದಲ್ಲಿ ಯಶಸ್ಸು.
ವೃಷಭ
ಕ್ರಿಯಾಶೀಲತೆಗೆ ಮನ್ನಣೆ ಲಭಿಸಲಿದೆ. ಇತರರ ಜತೆ ವಿನಯವಾಗಿ ಸಂವಹನ ನಡೆಸಿ. ಪ್ರೇಮದ ಅಹವಾಲು ನಿರಾಶೆ ತರಬಹುದು.
ಮಿಥುನ
ನೀವು ಏನನ್ನು ಬಯಸುತ್ತಿದ್ದೀರಿ ಎಂದು ಮೊದಲು ಆತ್ಮವಿಮರ್ಶೆ ನಡೆಸಿ. ಗುರಿ ಇಲ್ಲದೆ ಅಲೆದಾಡಬೇಡಿ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಿ.
ಕಟಕ
ಹೊಸ ಸಂಬಂಧ ಬೆಳೆಸಿಕೊಂಡವರಿಗೆ ಕಠಿಣ ದಿನ. ಭಿನ್ನಮತ ಸಂಭವ. ಜ್ವರ, ಕೆಮ್ಮು ಬಾಽಸಬಹುದು. ಪರೀಕ್ಷೆಯಲ್ಲಿ ಯಶಸ್ಸು.
ಸಿಂಹ
ಗೊಂದಲ ಸೃಷ್ಟಿಸಿದ್ದ ವಿಷಯ ತಿಳಿಯಾಗಲಿದೆ. ಆಪ್ತರಿಂದ ನೆರವು ಲಭ್ಯ. ಹೆಚ್ಚು ಶ್ರಮವಿಲ್ಲದೆ ಕಾರ್ಯ ಸಾ-ಲ್ಯ. ವಿದ್ಯಾರ್ಥಿಗಳಿಗೆ ಯಶ.
ಕನ್ಯಾ
ಅನವಶ್ಯ ಖರ್ಚು ತಪ್ಪಿಸಿ. ನಿಮ್ಮ ಆರ್ಥಿಕ ಸ್ಥಿತಿ ಅಸ್ತವ್ಯಸ್ತ ಆಗಬಹುದು. ಅಲರ್ಜಿಯಂತಹ ಸಮಸ್ಯೆ ಕಂಡುಬಂದೀತು. ಪ್ರೀತಿಯಲ್ಲಿ ಸಫಲತೆ.
ತುಲಾ
ವ್ಯವಹಾರದಲ್ಲಿ ಎಚ್ಚರ ವಹಿಸಿ. ಖಾಸಗಿ ಬದುಕಿಗೆ ಹೆಚ್ಚಿನ ಆದ್ಯತೆ ಕೊಡಬೇಕಾದೀತು. ಆರೋಗ್ಯ ಸಮಸ್ಯೆ ನಿವಾರಣೆ, ಸ್ವಾಸ್ಥ್ಯ ವೃದ್ಧಿ.
ವೃಶ್ಚಿಕ
ನಿಮ್ಮ ಉದ್ದೇಶಕ್ಕೆ ಪರಿಚಿತರಿಂದಲೇ ಅಡ್ಡಿ ಉಂಟಾದೀತು. ವೃತ್ತಿಯಲ್ಲಿ ಒತ್ತಡ ಹೆಚ್ಚು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡೀತು.
ಧನು
ನಿಮ್ಮ ಸುತ್ತಮುತ್ತ ಉತ್ಸಾಹದ ವಾತಾವರಣ. ನೀವೂ ಅದರಲ್ಲಿ ಒಳಗೊಳ್ಳಿ. ಸಾಂಸಾರಿಕ ಸಮಸ್ಯೆ ಪರಿಹಾರ. ಆತ್ಮೀಯ ಬಂಧು ಭೇಟಿ.
ಮಕರ
ವಿನಯವೇ ನಿಮ್ಮ ಶಕ್ತಿ. ಅದರಿಂದಲೇ ನಿಮ್ಮ ಕೆಲಸ ಸಾಽಸುವಿರಿ. ತಿನ್ನುವ ಹವ್ಯಾಸ ಬದಲಿಸಿ.        ಅನಾರೋಗ್ಯಕರ ಆಹಾರ ದೂರವಿಡಿ.
ಕುಂಭ
ದೊಡ್ಡ ಗುರಿ ಇಟ್ಟುಕೊಳ್ಳುವುದು ತಪ್ಪಲ್ಲ. ಏಕೆಂದರೆ ಎಲ್ಲವನ್ನೂ ನೀವು ಸಾಽಸಬಲ್ಲಿರಿ. ಗ್ರಹಗತಿ ನಿಮಗೆ ಪೂರಕವಾಗಿದೆ.
ಮೀನ
ಎಲ್ಲರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ಹೊರಗಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಸಣ್ಣಪುಟ್ಟ ಗಾಯವಾದೀತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!