ದಿನಭವಿಷ್ಯ: ವೃತ್ತಿಪರ ವ್ಯವಹಾರಗಳಿಗೆ ಲಾಭದಾಯಕ ದಿನ, ಅತಿಯಾದ ಮಾತು ಒಳ್ಳೆಯದಲ್ಲ

ಮೇಷ
ಕೌಟುಂಬಿಕ ಕೆಲಸದಲ್ಲಿ  ಹೆಚ್ಚು ನಿರತರಾಗಬೇಕಾಗುವುದು. ಮನಶ್ಯಾಂತಿ ಕೆಡಿಸಿದ್ದ ವಿಷಯ ಇತ್ಯರ್ಥ. ಆತ್ಮೀಯರ  ನೆರವು.
ವೃಷಭ
ಬಿಡುವಿಲ್ಲದ ದಿನ. ವೃತ್ತಿಯಲ್ಲಿ ಏರುಪೇರು. ದುಡುಕಿನ ನಿರ್ಧಾರ ಬೇಡ. ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಉದ್ವಿಗ್ನತೆ ಉಂಟಾದರೂ ಬಳಿಕ ನಿರಾಳತೆ.
ಮಿಥುನ
ಖಾಸಗಿ ಸಮಸ್ಯೆ. ಪರಿಹಾರ ಸುಲಭವಲ್ಲ.  ಬೆಳೆಯಗೊಟ್ಟಷ್ಟೂ ಹಾನಿ ಹೆಚ್ಚು. ತಪ್ಪು ಮಾತು ವಿವಾದ ಹೆಚ್ಚಿಸೀತು. ಸಹನೆಯ ನಡೆ ಮುಖ್ಯ.
ಕಟಕ
ಅನ್ಯರಿಗೆ ನೀಡಿದ ಹಣ ಮತ್ತೆ ಸಿಗುವುದು ಕಷ್ಟವಾದೀತು. ನೆರವು ನೀಡುವ ಮುನ್ನ ಯೋಚಿಸಿ. ಕೌಟುಂಬಿಕ ಅಸಮಾಧಾನ.
ಸಿಂಹ
ನಿಮ್ಮ ಸೂಕ್ಷ್ಮ ನೋಟ ಇತರರ ತಪ್ಪು ಗುರುತಿಸಬಲ್ಲುದು. ಅದರಿಂದ ಸಂಘರ್ಷ ಆಗದಂತೆ ನೋಡಿಕೊಳ್ಳಿ.         ಕನ್ಯಾ
ಮನೆಯಲ್ಲಿ ಇಂದು ಹೆಚ್ಚುವರಿ ಕೆಲಸ. ಸಂಜೆ ವೇಳೆಗೆ ಸುಸ್ತಾಗುವಿರಿ. ದೇಹಸ್ಥಿತಿ ಕಾಪಾಡಲು ವ್ಯಾಯಾಮ ಮಾಡುವುದೊಳಿತು.
ತುಲಾ
ನಿಮ್ಮ ಮನಸ್ಸು ಪದೇಪದೇ ಅಸ್ಥಿರತೆ ಅನುಭವಿಸಬಹುದು. ಆತ್ಮೀಯರಿಂದ ಕಡೆಗಣನೆ. ಮನಸ್ಸಿಗೆ ನೋವು. ಹಣದ ಚಿಂತೆ ಕಾಡಬಹುದು.
ವೃಶ್ಚಿಕ
ದೇಹಾರೋಗ್ಯ ಕಾಪಾಡಲು ಆದ್ಯತೆ ಕೊಡಿ. ನಿರ್ಲಕ್ಷ್ಯವು ಅಸೌಖ್ಯಕ್ಕೆ  ಕಾರಣ ಆಗಬಹುದು.  ಖರ್ಚು ಹೆಚ್ಚಳ. ಖರೀದಿ ಉತ್ಸಾಹ ನಿಯಂತ್ರಿಸಿ.
ಧನು
ದೀರ್ಘ ಕಾಲದ ಸಮಸ್ಯೆ ಪರಿಹರಿಸಲು ಯತ್ನಿಸಿ. ಅದನ್ನು ಹಾಗೇ ಬಿಡಬೇಡಿ.  ಸಂಗಾತಿ ಜತೆಗಿನ ಬಿಕ್ಕಟ್ಟು ನಿವಾರಿಸಿ. ಮುಕ್ತ ಮನಸ್ಸಿರಲಿ.
ಮಕರ
ಕೆಲ ವಿಷಯ ಗಂಭೀರವಾಗಿ ತೆಗೆದುಕೊಳ್ಳಿ. ಲಘುವಾಗಿ ಪರಿಗಣಿಸಬೇಡಿ. ಆತ್ಮೀಯರ ಭಾವನೆಗೆ ಗಮನ ಕೊಡಿ, ಸ್ಪಂದಿಸಿ.
ಕುಂಭ
ಏಕತಾನತೆ ನಿಮಗಿಷ್ಟವಿಲ್ಲ. ಹೊಸತನಕ್ಕೆ ತುಡಿಯುವಿರಿ. ಉದ್ಯೋಗದಲ್ಲಿ ಉನ್ನತಿ.  ಕೌಟುಂಬಿಕ ಸಮಾಧಾನ. ಬಂಧು ಭೇಟಿ.
ಮೀನ
ಇತರರ ಜತೆ ಹೊಂದಾಣಿಕೆ ಇರಲಿ. ಇದು  ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗುವುದು. ಆಪ್ತರ ಜತೆ ಕಾಲ ಕಳೆಯುವ ಅವಕಾಶ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!