ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಸಮಸ್ಯೆರಹಿತ ನೆಮ್ಮದಿಯ ದಿನವಿದು. ಆರ್ಥಿಕ ಸ್ಥಿತಿ ಸದೃಢ. ನಿಮ್ಮ ಇಷ್ಟದ ವಿಷಯದ ಮೇಲೆ ಹಣ ಖರ್ಚು ಮಾಡುವಿರಿ. ಆಹಾರ ಸೇವನೆಯಲ್ಲಿ ಹಿತಮಿತವಿರಲಿ.

ವೃಷಭ
ನಿಮ್ಮ ಪಾಲಿಗೆ ಪ್ರಗತಿಯ ದಿನ. ವೃತ್ತಿಯಲ್ಲಿ  ನಿಮಗೆ ಅನುಕೂಲ ಬೆಳವಣಿಗೆ. ಖಾಸಗಿ ಬದುಕಲ್ಲೂ ನೆಮ್ಮದಿ ತರುವ ವಿದ್ಯಮಾನ. ಆರ್ಥಿಕ ಲಾಭ.

ಮಿಥುನ
ಸ್ನೇಹಿತರಿಂದ ಉತ್ತಮ ಸುದ್ದಿ ಕೇಳುವಿರಿ. ಸಂಗಾತಿ ಜತೆಗೆ ಭಾವನಾತ್ಮಕ ಸಂವಾದ. ಆಪ್ತರ ಜತೆ ವ್ಯವಹರಿಸುವಾಗ ಅವರ ಭಾವನೆಗೂ ಬೆಲೆ ಕೊಡುವುದೊಳಿತು.

ಕಟಕ
ಅನಿರೀಕ್ಷಿತ ಲಾಭ. ಪ್ರಾಮಾಣಿಕ ಕಾರ್ಯಕ್ಕೆ ತಕ್ಕ ಫಲ ಸಿಗುವುದು. ನಿಮ್ಮ ವಿರೋಧಿಸುವ ಜನರು ಸುಮ್ಮನಾಗುವರು. ಕೌಟುಂಬಿಕ ನೆಮ್ಮದಿ.

ಸಿಂಹ
ಬಿಡುವಿಲ್ಲದ ದಿನ. ಕೆಲವು ಕಾರ್ಯ ಸಣ್ಣದಾದರೂ ನಿಮ್ಮ ಪಾಲಿಗೆ ಮಹತ್ವದ್ದು. ಅದನ್ನು ಸರಿಯಾಗಿ ಇತ್ಯರ್ಥ ಪಡಿಸಿ. ನಿರ್ಲಕ್ಷಿಸಬೇಡಿ.

ಕನ್ಯಾ
ಆತ್ಮೀಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ವಾದವಿವಾದ ಸಂಬಂಧ ಕೆಡಿಸದಂತೆ ನೋಡಿಕೊಳ್ಳಿ. ಆರೋಗ್ಯದ ಕುರಿತು ಹೆಚ್ಚಿನ ಗಮನ ಅಗತ್ಯ.

ತುಲಾ
ಆರ್ಥಿಕವಾಗಿ ನಿಮಗೆ ಉತ್ತಮ ದಿನ. ವ್ಯವಹಾರದಲ್ಲಿ ಲಾಭ. ನಿಮ್ಮ ನಾಯಕತ್ವ ಗುಣದಿಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ಶಾಂತಿ.

ವೃಶ್ಚಿಕ
ಸಂಗಾತಿ ಜತೆ ವ್ಯವಹರಿಸುವಾಗ ನಿಮ್ಮ ಅಹಂಭಾವ ತೊರೆಯಿರಿ. ಇಲ್ಲವಾದರೆ ಸಂಬಂಧ ಕೆಡಬಹುದು. ಸಣ್ಣ ವಿಷಯಕ್ಕೆ ಒತ್ತಡ ತಂದುಕೊಳ್ಳಬೇಡಿ.

ಧನು
ಉದ್ವಿಗ್ನ ಮತ್ತು ಒತ್ತಡದ ದಿನ. ಕೆಲಸದ ಹೊರೆ ಅಧಿಕ. ಕಷ್ಟದ ಪರಿಸ್ಥಿತಿಯಲ್ಲೂ ಸಮಚಿತ್ತ ಕಾಯಲು ಪ್ರಯತ್ನಿಸಿ. ಕೌಟುಂಬಿಕ ಅಸಮಾಧಾನ.

ಮಕರ
ಹೊಣೆಗಾರಿಕೆ ನಿಭಾಯಿಸುವಾಗ ಎಚ್ಚರ ವಹಿಸಿ. ನಡೆನುಡಿಯ ವಿಚಾರದಲ್ಲಿ ಎರಡೆರಡು ಬಾರಿ ಯೋಚಿಸಿ ವ್ಯವಹರಿಸಿ. ತಪ್ಪು ಮಾತು ಹಾನಿ ತಂದೀತು.

ಕುಂಭ
ಹೆಚ್ಚು ಉತ್ಸಾಹದ ದಿನ. ನಿಮ್ಮ ವ್ಯವಹಾರ ಸುಗಮವಾಗಿ ಸಾಗುವುದು. ವಿಘ್ನಗಳ ನಿವಾರಣೆ. ಸಂಗಾತಿಯ ಹುಡುಕಾಟ ಸಫಲವಾಗಲಿದೆ.

ಮೀನ
ಸಹೋದ್ಯೋಗಿಗಳು ನಿಮಗೆ ತೊಂದರೆ ಸೃಷ್ಟಿಸಬಹುದು. ದುಡುಕಿನ ಕ್ರಮ ತೆಗೆದುಕೊಳ್ಳದಿರಿ. ಹಣಕಾಸು ಸಮಸ್ಯೆ ಉಂಟಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!