ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಸಣ್ಣ ಹಿನ್ನಡೆಗೆ ಧೃತಿಗೆಡದಿರಿ. ಮತ್ತೆ ಪ್ರಯತ್ನ ಮಾಡಿ. ವಿಳಂಬವಾದರೂ ನಿಮ್ಮ ಗುರಿ ಈಡೇರಲಿದೆ. ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣಲಿದೆ.

ವೃಷಭ
ವಾಗ್ವಾದವನ್ನು ಅತಿರೇಕಕ್ಕೆ ಕೊಂಡೊಯ್ಯದಿರಿ. ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಅದುವೇ ದಾರಿ. ಅಧ್ಯಾತ್ಮದ ವಿಷಯ ಹೆಚ್ಚು ಆಸಕ್ತಿ ಮೂಡಿಸಬಹುದು.

ಮಿಥುನ
ಆತ್ಮೀಯರ ಸಂಗದಲ್ಲಿ ಸಂತೋಷ ಕಾಣುವಿರಿ. ನಿಮ್ಮ ನಡೆನುಡಿ ಕೆಲವರ ಮನ ನೋಯಿಸುವ ಸಾಧ್ಯತೆಯಿದೆ. ಅದಕ್ಕೆ ಆಸ್ಪದ ಕೊಡದಿರಿ. ಖರ್ಚು ಅಧಿಕ.

ಕಟಕ
ಯಾವುದೇ ವಿಷಯದಲ್ಲಿ ಸ್ಪಷ್ಟತೆಯಿಲ್ಲದೆ ದುಡುಕಿನ ನಿರ್ಧಾರ ತಾಳದಿರಿ. ಪರಿಹಾರಗೊಳ್ಳದ ಕೆಲ ವಿಚಾರಗಳು ಮನಸ್ಸು ಕೊರೆಯುತ್ತದೆ.

ಸಿಂಹ
ಇಂದಿನ ದಿನ ಸಂತೋಷದಿಂದ ಕಳೆಯುವ ಯೋಜನೆ ನಿಮ್ಮದಾಗಿದ್ದರೆ ಅದಕ್ಕೆ ಯಾವ ಅಡ್ಡಿ ಬರಲಾರದು. ನಿಮ್ಮ ಉದ್ದೇಶ ಈಡೇರಿಕೆ.

ಕನ್ಯಾ
ಇಂದು ಹೊಟ್ಟೆ ಕೆಡದಂತೆ ನೋಡಿಕೊಳ್ಳಿ.   ಭಾವನಾತ್ಮಕ ಏರುಪೇರು ಉಂಟಾದೀತು. ಸಣ್ಣ ವಿಷಯಕ್ಕೂ ಮನಸ್ಸು ಕೆಡಿಸಿಕೊಳ್ಳುವ ಪ್ರಸಂಗ ಉಂಟಾದೀತು.

ತುಲಾ
ಸಂತೋಷ ಮತ್ತು ತೃಪ್ತಿಕರ ದಿನ. ನೀವು ಬಯಸಿದಂತೆ ದಿನ ಸಾಗುವುದು. ಆಪ್ತರ ಜತೆ ಆತ್ಮೀಯ ಕಾಲಕ್ಷೇಪ. ಶುಭ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ.

ವೃಶ್ಚಿಕ
ಏಕಕಾಲದಲ್ಲಿ ನಿಮ್ಮ ಬದುಕಲ್ಲಿ ವಿವಿಧ ಬೆಳವಣಿಗೆ ಉಂಟಾದೀತು. ನೀವು ಸಹನೆಯಿಂದ, ಕ್ರೀಡಾಸ್ಫೂರ್ತಿಯಿಂದ ವ್ಯವಹರಿಸಬೇಕು.

ಧನು
ಇಂದು ನಿಮಗೆ ಕೆಲಸ ಹೆಚ್ಚು. ಆರಾಮವಾಗಿ ದಿನ ಕಳೆಯಲು ಸಮಯ ಸಿಗಲಾರದು. ಕೆಲವರ ವರ್ತನೆ ಅಸಹನೀಯ ಅನಿಸಬಹುದು.

ಮಕರ
ನೀವು ಕೈಗೊಳ್ಳುವ ನಿರ್ಧಾರ ನಿಮಗೆ ಒಳಿತು ತರಲಿದೆ. ಪ್ರತಿಕೂಲ ಪರಿಸ್ಥಿತಿ ಕೂಡಾ ನಿಮಗೆ ಅನುಕೂಲಕರವಾಗಿ ಮಾರ್ಪಡುವುದು. ಧೈರ್ಯದಿಂದಿರಿ.

ಕುಂಭ
ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಉದ್ಯೋಗ ಕ್ಷೇತ್ರದಲ್ಲಿ ತೃಪ್ತಿಕರ ಬೆಳವಣಿಗೆ. ಹಿರಿಯರು ತಮ್ಮ ಆಹಾರದ ವಿಷಯದಲ್ಲಿ ಎಚ್ಚರ ವಹಿಸಬೇಕು.

ಮೀನ
ಸವಾಲಿನ ದಿನ. ಕೆಲವಾರು ವಿಷಯ ನಿಮ್ಮ ಮನಶ್ಯಾಂತಿ ಕದಡುತ್ತದೆ. ಮನೆಯಲ್ಲಿ  ವಾಗ್ವಾದ ನಡೆದೀತು. ಅತಿಯಾದ ಚಿಂತೆಯಿಂದ ತಲೆಬೇನೆ

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!