ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮ ಗುರಿ ಸಾಧಿಸುವ ಪ್ರಯತ್ನಕ್ಕೆ ಕೆಲವರು ಅಡ್ಡಿ ಬರುತ್ತಾರೆ. ಅವರ ಪ್ರಯತ್ನವು ನಿಷ್ಪಲಗೊಳ್ಳುವುದು.  ಅನವಶ್ಯ ಖರ್ಚು ನಿಯಂತ್ರಿಸಿ.

ವೃಷಭ
ಬಯಸಿದ ಉದ್ದೇಶವೊಂದು ಇಂದು ಈಡೇರುವುದು. ಅದರಿಂದ ಮನಸ್ಸಿಗೆ ನಿರಾಳತೆ. ಆತ್ಮೀಯರ ಜತೆ ಸಂತೋಷದ ಕಾಲಕ್ಷೇಪ.

ಮಿಥುನ
ಇತರರ ಕಾರಣದಿಂದಾಗಿ ನಿಮ್ಮ ಮನಸ್ಸು  ಇಂದು ನೆಗೆಟಿವ್ ಚಿಂತನೆಯಿಂದ ತುಂಬುವುದು. ಅಂತಹ ಚಿಂತನೆಯನ್ನು ದೂರ ಮಾಡಿರಿ.

ಕಟಕ
ಕೌಟುಂಬಿಕ ಸಮಸ್ಯೆ ಪರಿಹರಿಸಲು ಶಕ್ತರಾಗುವಿರಿ. ಆತ್ಮವಿಶ್ವಾಸ ಹೆಚ್ಚುವುದು. ಬಂಧುಗಳಿಂದ ನಿಮಗೆ ಸಹಕಾರ ಲಭ್ಯ.

ಸಿಂಹ
ನಿಮ್ಮ ಕಾರ್ಯದ ಕುರಿತಂತೆ ಇಂದು ಉದಾಸ ಭಾವ. ಇತರ ವಿಷಯ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವುದು. ಕೌಟುಂಬಿಕ ಉದ್ವಿಗ್ನತೆ.

ಕನ್ಯಾ
ನಿಮ್ಮ ಕೆಲಸ ಇಂದೇ ಪೂರೈಸಲು ಗಮನ ಕೊಡಿ. ಬಾಕಿ ಉಳಿಸಿದರೆ ನಿಮಗೇ ಹಾನಿ. ವ್ಯವಹಾರದಲ್ಲಿ ಲಾಭ. ಖರೀದಿ ಉತ್ಸಾಹ, ಖರ್ಚು ಹೆಚ್ಚಳ.

ತುಲಾ
ವ್ಯವಹಾರದಲ್ಲಿ ಯಶಸ್ಸು. ಅಡ್ಡಿಗಳ ನಿವಾರಣೆ. ಹೊಸ ವ್ಯವಹಾರಕ್ಕೆ ಸರಿಯಾಗಿ ಯೋಚಿಸದೆ ಕೈ ಹಾಕಬೇಡಿ. ಕೌಟುಂಬಿಕ ಅಸಹಕಾರ.

ವೃಶ್ಚಿಕ
ಇತರರಿಂದ ಸಾಧ್ಯವಾಗದ ಕಾರ್ಯ ನೀವು ಮಾಡುವಿರಿ. ನಿಮ್ಮ ಸಾಧನೆ ಇತರರ ಗಮನ ಸೆಳೆಯಲಿದೆ. ನಿಮ್ಮ ಮುಖ್ಯ ಉದ್ದೇಶ ಇಂದು ಈಡೇರುವುದು.

ಧನು
ಹಣದ ವ್ಯಹಾರದಲ್ಲಿ ಯಶ ಸಿಗುವುದು. ತೃಪ್ತಿಕರ ಬೆಳವಣಿಗೆ. ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯಲು ಗಮನ ಕೊಡಿ. ಅವರ ಆವಶ್ಯಕತೆ  ಪೂರೈಸಿರಿ.

ಮಕರ
ಬೆಳಗಿನ ಹೊತ್ತು ಅಸ್ಥಿರತೆ, ಆತಂಕ ಕಾಡುವುದು. ಬಳಿಕ ಅದರಿಂದ ನಿರಾಳತೆ ಪಡೆಯುವಿರಿ. ಕುಟುಂಬಸ್ಥರ ಜತೆ ಸಮಯ ಕಳೆಯಿರಿ.

ಕುಂಭ
ಕೆಲವು ಸಮಸ್ಯೆ ನಿಮ್ಮ ಅಸಹನೆ ಹೆಚ್ಚಿಸುವುದು. ಅನವಶ್ಯ ವಿಚಾರ ತಲೆಯಲ್ಲಿ ತುಂಬಿಕೊಳ್ಳುವುದು. ಕರ್ತವ್ಯಕ್ಕೆ ಅಡ್ಡಿ ಉಂಟಾಗದಿರಲಿ.

ಮೀನ
ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಮನ್ನಣೆ ದೊರಕುವುದು.   ಇದೇವೇಳೆ ನಿಮ್ಮ ಹೊಣೆಗಾರಿಕೆಯೂ ಹೆಚ್ಚುವುದು. ಕೆಲವರ ಅಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!