ಮೇಷ
ಮಾನಸಿಕ ತೊಳಲಾಟ. ಮನಶ್ಯಾಂತಿ ಕಂಡುಕೊಳ್ಳಲು ಆದ್ಯತೆ ಕೊಡಬೇಕು. ಸಮಸ್ಯೆಗಳನ್ನು ಪರಿಹರಿಸುವ ದಾರಿ ಕಂಡುಕೊಳ್ಳಿ.
ವೃಷಭ
ಮನಸ್ಸಿನ ಗೊಂದಲ ನಿವಾರಣೆ. ನಿರಾಳತೆ. ಶಾಂತ ಮನಸ್ಥಿತಿಯಿಂದಾಗಿ ಸೂಕ್ತ ನಿರ್ಧಾರ ತಾಳಲು ಸಮರ್ಥರಾಗುವಿರಿ. ಬಾಂಧವ್ಯ ವೃದ್ಧಿ.
ಮಿಥುನ
ಹಲವು ವಿಧಗಳಲ್ಲಿ ನಿಮಗಿಂದು ಸಂತೋಷದ ದಿನ. ಕಾರ್ಯದಲ್ಲಿ ಯಶಸ್ಸು,ಆಪ್ತರ ಉನ್ನತಿ ಮನಸ್ಸಿಗೆ ಹರ್ಷ ತರುವುದು. ಆರ್ಥಿಕ ಸದೃಢತೆ.
ಕಟಕ
ನೆಗೆಟಿವ್ ಚಿಂತನೆಗಳಿಂದ ಮುಕ್ತಿ ಪಡೆಯುವಿರಿ. ನಿಮಗೆ ಶಾಂತಿ, ಸಂತೋಷ ನೀಡುವ ಕಾರ್ಯದಲ್ಲಿ ತೊಡಗುವಿರಿ. ಆಪ್ತರಿಂದ ಸಹಕಾರ, ಬೆಂಬಲ.
ಸಿಂಹ
ಭಾವನೆಯ ಮೇಲೆ ನಿಯಂತ್ರಣವಿರಲಿ. ಸಹನೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ನಿಮಗೆ ಸಂತೋಷ ತರುವ ವ್ಯಕ್ತಿಗಳ ಜತೆ ಇಂದು ದಿನ ಕಳೆಯಿರಿ.
ಕನ್ಯಾ
ಕಾರಣವಿಲ್ಲದೇ ಇಂದು ಮನಸ್ಸು ಉದಾಸ. ಕೆಲವು ಬೆಳವಣಿಗೆ ನೆಮ್ಮದಿಯನ್ನು ಕೆಡಿಸುತ್ತದೆ. ಆಪ್ತರು ನಿಮ್ಮನ್ನು ಕಡೆಗಣಿಸಿದ ನೋವು ಕಾಡುವುದು.
ತುಲಾ
ಖಾಸಗಿ ಬದುಕಿಗೆ ಗಮನ ಕೊಡಿ. ಅದನ್ನು ಕಡೆಗಣಿಸಬೇಡಿ. ವೃತ್ತಿಯ ಒತ್ತಡ ಕಡಿಮೆ ಮಾಡಿಕೊಂಡು ಕುಟುಂಬಸ್ಥರ ಜತೆ ಸಮಯ ಕಳೆಯಿರಿ.
ವೃಶ್ಚಿಕ
ನಿಮಗೆ ಹಿತಕರವೆನಿಸದ ಕಾರ್ಯ ಮಾಡುವ ಒತ್ತಡ ಉಂಟಾದೀತು. ಅಂತಹ ಭಾವನೆ ನಿಯಂತ್ರಿಸಿಕೊಳ್ಳಿ. ಆರ್ಥಿಕ ಒತ್ತಡ ಕಾಡುವುದು.
ಧನು
ಕೆಲಸದಲ್ಲಿ ಏಕಾಗ್ರತೆ ಮೂಡದು. ಮನಸ್ಸು ಅಶಾಂತ. ಹಾಗೆಂದು ಯಾವುದೇ ಕೆಲಸ ಬಾಕಿ ಉಳಿಸದಿರಿ. ಕೌಟುಂಬಿಕ ಪರಿಸ್ಥಿತಿ ಕೂಡ ನೆಮ್ಮದಿ ಕೆಡಿಸುವುದು.
ಮಕರ
ನೀವು ವಿಶ್ವಾಸವಿಟ್ಟ ವ್ಯಕ್ತಿಯಿಂದ ನೋವು ಸಿಗುವುದು. ಇದು ತಾತ್ಕಾಲಿಕ. ಅವರನ್ನು ದ್ವೇಷಿಸಲು ಹೋಗದಿರಿ. ತಪ್ಪಭಿಪ್ರಾಯ ನಿವಾರಿಸಿಕೊಳ್ಳಿ.
ಕುಂಭ
ಭಾವುಕರಾಗಿ ಇಂದು ವರ್ತಿಸುವಿರಿ. ಅದಕ್ಕೆ ಕಾರಣ ನಿಮ್ಮ ಪ್ರೀತಿಪಾತ್ರರ ವರ್ತನೆ. ಸಂಬಂಧ ಕೆಡುವಂತಹ ಅವಕಾಶ ಸೃಷ್ಟಿಸದಿರಿ. ಸಹನೆಯಿರಲಿ.
ಮೀನ
ಮನಸ್ಸು ಇಂದು ವ್ಯಗ್ರವಾದೀತು. ಅಂತಹ ಪರಿಸ್ಥಿತಿಯಲ್ಲಿ ಭಾವನೆ ನಿಯಂತ್ರಿಸಿ. ಹೊಂದಾಣಿಕೆ, ಸಮಾಧಾನ ಇಂದು ನಿಮ್ಮ ಮಂತ್ರವಾಗಲಿ.