ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮಗೆ ಸೂಕ್ತ ಅನಿಸುವ ವಿಚಾರಕ್ಕಷ್ಟೆ ಆದ್ಯತೆ ಕೊಡಿ. ಎಲ್ಲದರಲ್ಲೂ ಕೈಯಾಡಿಸುವ ಕೆಲಸಕ್ಕೆ ಹೋಗದಿರಿ. ಅದರಿಂದ ಪ್ರಯೋಜನವಿಲ್ಲ.
ವೃಷಭ
ವಿರಾಮ ಬಯಸುವ ದಿನ. ಆಪ್ತರ ಜತೆ ಕಾಲಕ್ಷೇಪ. ಆರ್ಥಿಕ ಯೋಜನೆ ರೂಪಿಸಲು ಸಕಾಲ. ಖರೀದಿ ದಾವಂತದಲ್ಲಿ  ಖರ್ಚು ಹೆಚ್ಚಾಗಲಿದೆ.
ಮಿಥುನ
ನಿಮ್ಮ ಕೆಲಸಕ್ಕಷ್ಟೆ ಗಮನ ಕೊಡಿ. ಇತರರು ಏನು ಭಾವಿಸುವರು ಎಂಬ ಚಿಂತೆ ಬೇಡ. ಮನೆಯಲ್ಲಿ ವಾಗ್ವಾದ ತಪ್ಪಿಸಿರಿ. ಸಹನೆಯಿಂದ ವರ್ತಿಸಿ.
ಕಟಕ
ನಿಮ್ಮ ತಾಳ್ಮೆಗೆ ತಕ್ಕ ಫಲ ದೊರೆಯುವುದು. ಹಿಂದೆ ಮಾಡಿದ ಪರಿಶ್ರಮಕ್ಕೆ ಫಲಿತಾಂಶ ದೊರಕಲಿದೆ. ಇತರರ ಆಮಿಷಕ್ಕೆ ಬಲಿಯಾಗಬೇಡಿ.
ಸಿಂಹ
ಮನೆಯಲ್ಲಿ ನಿಮ್ಮ ಸಂಬಂಧಕ್ಕೆ ಕುತ್ತು ತರುವಂತಿದ್ದ ಬಿಕ್ಕಟ್ಟು ಪರಿಹಾರ. ಇತರರ ಮನ ನೋಯಿಸದಂತೆ ವರ್ತಿಸಿರಿ.
ಕನ್ಯಾ
ನಿಮ್ಮ ಪರವಾದ ಬೆಳವಣಿಗೆಯೊಂದು ಸಂಭವಿಸುವುದು. ಅಚ್ಚರಿ ತಂದರೂ ನಿಮಗೆ ಒಳಿತಾಗಲಿದೆ. ವಿವಾಹಿತರಿಗೆ ಶುಭ ಸುದ್ದಿ.
ತುಲಾ
ನಿಮ್ಮ ಕೆಲಸ  ನೀವು ಮಾಡುತ್ತಾ ಹೋಗಿ. ನೆಗೆಟಿವ್ ವಿಷಯ ಮಾತನಾಡುವವರ ಬಗ್ಗೆ ಚಿಂತಿಸದಿರಿ.  ಕೌಟಂಬಿಕ ಭಿನ್ನಮತ ಶಮನ.
ವೃಶ್ಚಿಕ
ಶೀತ ಸಂಬಂಧಿ ಆರೋಗ್ಯ ಸಮಸ್ಯೆ ಕಾಡಬಹುದು. ಮುನ್ನೆಚ್ಚರಿಕೆ ವಹಿಸಿರಿ. ಸಾಂಸಾರಿಕ ಭಿನ್ನಮತ ಉಂಟಾದೀತು.
ಧನು
ಅಪೂರ್ಣ ಕೆಲಸವೊಂದು ಚಿಂತೆಗೆ ಕಾರಣವಾಗುವುದು. ಅದನ್ನು ಬೇಗನೆ ಮುಗಿಸಲು ಆದ್ಯತೆ ಕೊಡಿ. ಲಘು ಆಹಾರ ಸೇವನೆ ಒಳಿತು.
ಮಕರ
ಸಣ್ಣ ವಿಷಯವು ಗೊಂದಲಕ್ಕೆ ಕಾರಣ ಆಗುವುದು. ದೃಢ ನಿಶ್ಚಯ ಅವಶ್ಯ. ಚರ್ಮದ ಅಲರ್ಜಿ ಉಂಟಾದೀತು. ಸೂಕ್ತ ಎಚ್ಚರಿಕೆ ವಹಿಸಿರಿ.
ಕುಂಭ
ನಿಮ್ಮ ಪ್ರಾಮಾಣಿಕ ಮತ್ತು ಕಠಿಣ ಶ್ರಮಕ್ಕೆ ಫಲ ಸಿಕ್ಕುತ್ತಿಲ್ಲ ಎಂಬ ಕೊರಗು ಬಿಡಿ. ಅದರ ಫಲ ಸಿಕ್ಕೇ ಸಿಗುವುದು. ಕೌಟುಂಬಿಕ ಸಹಕಾರ ಸಿಗಲಿದೆ.
ಮೀನ
ನಿಮಗೆ ಕುಶಿ ತರುವ ಬೆಳವಣಿಗೆ  ಆಗಲಿದೆ. ಆರೋಗ್ಯ ವಿಷಯ ಕಡೆಗಣಿಸಬೇಡಿ. ಸೂಕ್ತ ಮುನ್ನೆಚ್ಚರಿಕೆ ಮರೆಯದಿರಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!