ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮ ಕಾರ್ಯ ಸಫಲತೆಗೆ ಇತರರ ಸಹಕಾರ ಅವಶ್ಯ. ಏಕಾಂಗಿ ಪ್ರಯತ್ನ ಫಲ ನೀಡದು. ಕೌಟುಂಬಿಕ ಉದ್ವಿಗ್ನತೆ ಹೆಚ್ಚುವುದು.

ವೃಷಭ
ಕೌಟುಂಬಿಕ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಅದರಿಂದ ಮಾನಸಿಕ ತೃಪ್ತಿ ಸಿಗಲಿದೆ. ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಅಗತ್ಯ.

ಮಿಥುನ
ಆಹಾರದಲ್ಲಿ ಪಥ್ಯ ಬೇಕಾದೀತು. ಆರೋಗ್ಯ  ಕಾಯ್ದುಕೊಳ್ಳಲು ಅದು ಅಗತ್ಯ. ಉದ್ವಿಗ್ನ ಸ್ಥಿತಿ ನೀವಾಗಿ ಸೃಷ್ಟಿಸಬೇಡಿ. ಸಂಯಮವಿರಲಿ.

ಕಟಕ
ಇತರರಿಗೆ ಸಲಹೆ ನೀಡುವ ಮುನ್ನ ನೀವು ಅದನ್ನು ಆಚರಣೆಗೆ ತನ್ನಿ. ಉದಾಸೀನತೆ ತೊರೆಯಿರಿ. ಹಾಗಿದ್ದರೆ ಮಾತ್ರ ಎಲ್ಲ ಸರಿಯಾದೀತು.

ಸಿಂಹ
ಹಣದ ವಿಚಾರದಲ್ಲಿ ಇತರರ ಸಲಹೆ ಕೇಳುತ್ತಾ ಹೋಗದಿರಿ. ನೀವೇ ಅದನ್ನು ಇತ್ಯರ್ಥಪಡಿಸಿ. ಬಂಧುಗಳ ಜತೆ ವಾಗ್ವಾದ ಸಂಭವ. ತಾಳ್ಮೆಯಿರಲಿ.

ಕನ್ಯಾ
ಯಶಸ್ವೀ ದಿನ. ಬಯಸಿದ ಕಾರ್ಯ ಈಡೇರುವುದು. ಬಿಕ್ಕಟ್ಟು ಇತ್ಯರ್ಥ. ಬಂಧು ಸಹಕಾರ. ಧನಾಗಮ. ಒಟ್ಟಿನಲ್ಲಿ ಸಂತೃಪ್ತಿ.

ತುಲಾ
ಗ್ರಹಗತಿ ನಿಮಗೆ ಪೂರಕ. ಬಿಕ್ಕಟ್ಟು ಪರಿಹಾರ. ವಿಘ್ನಗಳ ನಿವಾರಣೆ. ಸಾಂಸಾರಿಕ ಸಮಾಗಮ. ಆತ್ಮೀಯರ ಒಡನಾಟ ಹಿತ ತರುವುದು.

ವೃಶ್ಚಿಕ
ಆರ್ಥಿಕ ವ್ಯವಹಾರ ದಲ್ಲಿ  ವಿವೇಕ ಪ್ರದರ್ಶಿಸಿ. ಆತುರದ ತೀರ್ಮಾನ ಒಳಿತಲ್ಲ. ಯಾರದೋ ಮಾತು ಕೇಳಿ ಕೆಡಬೇಡಿ. ಕೌಟುಂಬಿಕ ತಲ್ಲಣ.

ಧನು
ನಿಮ್ಮನ್ನು ಕಾಡುತ್ತಿದ್ದ ದೈಹಿಕ ನೋವು ನಿವಾರಣೆ. ವೃತ್ತಿಯಲ್ಲಿ ಗೊಂದಲದ ಸ್ಥಿತಿ. ಸ್ಪಷ್ಟತೆ ಮೂಡದೆ ಮುಂದುವರಿಯದಿರಿ. ಭಾವನಾತ್ಮಕ ನೋವು.

ಮಕರ
ಮಾನಸಿಕ ತಾಕಲಾಟ. ವ್ಯವಹಾರದಲ್ಲಿ ಅಸ್ಥಿರತೆ. ನಿರೀಕ್ಷಿಸಿದ ಕಾರ್ಯ ಈಡೇರದೆ ಗೊಂದಲ. ಸಮಚಿತ್ತತೆ ಕಾಯ್ದುಕೊಳ್ಳಿ.

ಕುಂಭ
ಹಣದ ವಿಚಾರದಲ್ಲಿ ಬಿಗುವಿನಿಂದ ವರ್ತಿಸಿ. ಉದಾರತೆ ಧನಹಾನಿಗೆ ಕಾರಣವಾದೀತು. ಆರೋಗ್ಯ ವಿಷಯದಲ್ಲಿ ಹೆಚ್ಚು ಕಾಳಜಿ ಅವಶ್ಯ.

ಮೀನ
ಆರೋಗ್ಯಕ್ಕೆ ಆದ್ಯತೆ ಕೊಡಿ. ಆಹಾರದಲ್ಲಿ ಕಟ್ಟುನಿಟ್ಟು ಪಾಲಿಸಿ.  ಒಗ್ಗದ ಆಹಾರ ಸೇವನೆ ಬಿಡಿ. ಕೌಟುಂಬಿಕ ಅಶಾಂತಿ, ಅಸಹನೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!